ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿ, ಚಾಲಕ ಆಸ್ಪತ್ರೆಗೆ

ಅಪಘಾತಕ್ಕೀಡಾದ ರಿಕ್ಷಾ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಾರ್ನಾಡು-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಆರಾಹ್ನ ಆಸ್ಪತ್ರೆ ಬಳಿ ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ರಿಕ್ಷಾ ಚಾಲಕನನ್ನು ಕೆ ಎಸ್ ರಾವ್ ನಗರದ ಬಿಲ್ಲವ ಸಂಘದ ಬಳಿಯ ನಿವಾಸಿ ಪುರುಷೋತ್ತಮ (52) ಎಂದು ಗುರುತಿಸಲಾಗಿದೆ.

ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ ಚಾಲಕ
ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿರುವ ಚಾಲಕ

ಪುರುಷೋತ್ತಮ ತಮ್ಮ ರಿಕ್ಷಾದಲ್ಲಿ ಕೆ ಎಸ್ ರಾವ್ ನಗರದಿಂದ ಮುಲ್ಕಿ ಕಡೆಗೆ ಬರುತ್ತಿದ್ದಾಗ ಕಾರ್ನಾಡು ಆಸ್ಪತ್ರೆ ಬಳಿ ಹಠಾತ್ತನೆ ನಾಯಿಯೊಂದು ಅಡ್ಡ ಬಂದಾಗ ಬ್ರೇಕ್ ಹಾಕಿದ್ದು, ರಿಕ್ಷಾ ಪಲ್ಟಿಯಾಗಿದೆ. ಅಪಘಾತ ನಡೆದ ಸಂದರ್ಭ ರಿಕ್ಷಾದಲ್ಲಿ ಚಾಲಕ ಸಿಕ್ಕಿಹಾಕಿಕೊಂಡಿದ್ದು ಕೂಡಲೇ ಸ್ಥಳೀಯರು ಧಾವಿಸಿ ಚಾಲಕನನ್ನು ರಿಕ್ಷಾದಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಿಕ್ಷಾದಲ್ಲಿ ಯಾರೂ ಪ್ರಯಾಣಿಕರಿಲ್ಲದ ಕಾರಣ ಭಾರೀ ಅಪಾಯ ತಪ್ಪಿದೆ.