ಸರಕಾರಕ್ಕೆ ಇಂಥವರೇ ಬೇಕಾ

ಲೋಕಾಯುಕ್ತರಾಗಿ ನೇಮಕಗೊಂಡ ವಿಶ್ವನಾಥ ಶೆಟ್ಟಿಯವರ ಮೇಲೆ ಬೇಕಾದಷ್ಟು ಆಪಾದನೆ  ಅಕ್ರಮ ಆಸ್ತಿಗಳ ಸರಮಾಲೆ ಇರುವಾಗ ಇಂಥವರ ನೇಮಕ ಯಾಕೆ   ಈ ಹುದ್ದೆಗಳಿಗೆ ನೇಮಕ ಆದವರ ಎಲ್ಲರ ಹಣೆಬರಹವೇ ಹೀಗೆಯೇ   ಬೇರೆ ಯಾರು ಉತ್ತಮ ಆಡಳಿತ ನಡೆಸುವವರ್ಯಾರೂ ಇಲ್ಲವೇ   ಹೀಗಾದರೇ ಈ ಹುದ್ದೆಯ ಗತಿಯೇನು   ಆ ದೇವರೇ ಬಲ್ಲ   ಕೆಪಿಎಸ್‍ಸಿಯ ಅಧ್ಯಕ್ಷರಾಗಿ ನೇಮಕಗೊಂಡ ಟಿ ಶ್ಯಾಮ ಭಟ್ ಮೇಲೂ ಬೇಕಾದಷ್ಟು ಆಪಾದನೆ ಅಕ್ರಮ ಆಸ್ತಿ ಭ್ರಷ್ಟಾಚಾರಗಳ ಸರಮಾಲೆ ಇದ್ದರೂ ಅವರ ಮೇಲೆ ಕ್ರಮ ಜರುಗಿಸಲಿಲ್ಲ. ಇಂಥವರೇ ಸೀಎಂಗೆ ಆಪ್ತರು. ಸರಕಾರಕ್ಕೆ ಇಂಥವರೇ ಬೇಕಾ  ಇದರ ಗುಟ್ಟೇನು

  • ಆರ್ ರಘುರಾಜ್  ಪುತ್ತೂರು