ವೈದ್ಯರು ಕೂಡಾ ಮನುಷ್ಯರು

ವೈದ್ಯರ ಮೇಲೆ ಉತ್ತರ ಕನ್ನಡ ಸಂಸದ ಹಲ್ಲೆ ನಡೆಸಿದ್ದನ್ನು ಖಂಡಿಸಿ ಕರಾವಳಿ ಜಿಲ್ಲೆಗಳಲ್ಲಿ ವೈದ್ಯರು ಪ್ರತಿಭಟನೆ ನಡೆಸಿರುವುದು ಸಹಜವಾಗಿದೆ.
ವೈದ್ಯರು ಕೂಡಾ ಮನುಷ್ಯರಾಗಿದ್ದು, ಅವರಿಗೂ ಇತರರಂತೆ ಸಹಜವಾಗಿ ಬದುಕುವ ಹಕ್ಕು ಇದೆ. ದೊಡ್ಡ ಮನುಷ್ಯರು ಆಸ್ಪತ್ರೆಗೆ ದಾಖಲಾದರು ಎಂದ ಕೂಡಲೇ ಹಿರಿಯ ವೈದ್ಯರು ಬಂದು ಚಿಕಿತ್ಸೆ ನೀಡುವುದು ಸಾಧ್ಯವಾಗುವುದಿಲ್ಲ. ಎಮೆರ್ಜೆನ್ಸಿಗೆಂದು ಆಸ್ಪತ್ರೆಗಳಲ್ಲಿ ವೈದ್ಯರು ಇದ್ದೇ ಇರುತ್ತಾರೆ. ವ್ಯವಸ್ಥೆಗೆ ಹೊಂದಿಕೊಳ್ಳದೆ ಸ್ವೇಚ್ಛಾಚಾರದಿಂದ ವರ್ತಿಸಿದ ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕಾಗಿದೆ

  • ಅನುಪಮಾ, ಮಂಗಳೂರು