ವೈದ್ಯರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿಯ ಟಿ ಎಸ್ ಎಸ್ ಆಸ್ಪತ್ರೆಯ ವೈದ್ಯರ ಮೇಲೆ ಸಂಸದರು ನಡೆಸಿದ ಹಲ್ಲೆ ಖಂಡಿಸಿ ಶಿರಸಿ ಐಎಂಎ ಪ್ರತಿಭಟನಾರ್ಥ ಮನವಿಯನ್ನು ಮಂಗಳವಾರ ಶಿರಸಿ ಎಸಿಗೆ ಅರ್ಪಿಸಿದರು.

ಶಿರಸಿ ಐಎಂಎ ಅಧ್ಯಕ್ಷ ಡಾ ಕೈಲಾಸ ಪೈ ನೇತೃತ್ವದಲ್ಲಿ ನೀಡಿದ ಮನವಿಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಇರುವ ನಮ್ಮ ಮೇಲೆ ಜವಾಬ್ದಾರಿ ಸ್ಥಾನದಲ್ಲಿರುವ ಸಂಸದರು ಕಾನೂನು ಬಾಹಿರ ಹಲ್ಲೆ ನಡೆಸಿರುವದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಘಟನೆಗಳು ವೈದ್ಯರ ಮನೋಸ್ಥೈರ್ಯ ಕುಗ್ಗಿಸುತ್ತಿದ್ದು, ವೃತ್ತಿಯಲ್ಲಿ ಮುಂದುವರಿಯುವದು ದುಸ್ತರವಾಗಿದೆ. ಇಂತಹ ಘಟನೆಗಳು ಜನಸಾಮಾನ್ಯರಿಗೂ ಕಾನೂನು ಕೈಗೆತ್ತಿಕೊಳ್ಳಲು ಪ್ರಚೋದಿಸುತ್ತದೆ. ಇಂತಹ ಘಟನೆಗಳು ಮರು ಕಳಿಸದಂತೆ ಸೂಕ್ತ ರಕ್ಷಣಾ ಕ್ರಮ ಕೈಗೊಂಡು ಆರೋಪಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಯಿತು.