ಪ್ರಥಮ್ ಅಸಲೀ ಹೆಸರೇನು ಗೊತ್ತಾ?

ಕಳೆದ ವರ್ಷ `ಬಿಗ್ ಬಾಸ್’ ಗೆದ್ದು ಏಕ್ ದಂ ಫೇಮಸ್ ಆಗಿರುವ ಪ್ರಥಮ್ ಈಗಾಗಲೇ `ದೇವ್ರಂಥ ಮನುಷ್ಯ’ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮಿಂಚಿದ್ದಾನೆ. ಇನ್ನೂ ಆತನ ಕೆಲವು ಚಿತ್ರಗಳ ಶೂಟಿಂಗ್ ನಡೀತಾ ಇದೆ. ಇದರ ನಡುವೆಯೇ ಪ್ರಥಮ್ ತನ್ನ ಕುಟುಂಬ ಸಮೇತ ಕಳೆದ ವೀಕೆಂಡ್ ನಡೆದ ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿರುವ `ಫ್ಯಾಮಿಲಿ ಪವರ್’ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆ ಒದಗಿಸಿದ್ದಾನೆ.  ಈ ಸಂದರ್ಭದಲ್ಲಿ ತನ್ನ ಅಸಲೀ ಹೆಸರು `ಪುನೀತ್’ ಎಂದು ಹೇಳಿಕೊಂಡು ಪುನೀತ್ ಆದಿಯಾಗಿ ಎಲ್ಲರಿಗೂ ಅಚ್ಚರಿಗೊಳಿಸಿದ್ದಾನೆ.

ಪ್ರಥಮ್ ಇದಕ್ಕೆ ಸಾಕ್ಷಿಯಾಗಿ ತನ್ನ ಆಧಾರ್ ಕಾರ್ಡ್ ಕೂಡಾ ತೋರಿಸಿದ್ದಾನೆ. ಅದಲ್ಲದೇ “ದೇವ್ರಾಣೆಗೂ ನನ್ನ ನಿಜವಾದ ಹೆಸರು ಪುನೀತ್. ನಮ್ಮ ಅಮ್ಮ ನಿಮ್ಮ ದೊಡ್ಡ ಫ್ಯಾನ್. ಇಂಡಸ್ಟ್ರಿಗೆ ಒಬ್ಬರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅದಕ್ಕೆ ಡುಪ್ಲಿಕೇಟ್ ಕಾಪಿ ಇರಬಾರದು ಅಂತ ನನ್ನ ಹೆಸರು ಬದಲಾಯಿಸಿಕೊಂಡೆ” ಅಂತ ತನ್ನದೇ ಸ್ಟೈಲಿನಲ್ಲಿ ಹೇಳಿ ಎಲ್ಲರಿಗೂ ಸರ್ಪೈಸ್ ನೀಡಿದ್ದಾನೆ. ಅಂದ ಹಾಗೆ ಪ್ರಥಮ್ ಕಾರ್ಯಕ್ರಮದ ಕೊನೆಯಲ್ಲಿ ಪುನೀತ್ ಹಾಕಿಕೊಂಡಿರುವ ಕೋಟನ್ನೂ ಕೇಳಿ ಪಡೆದಿದ್ದಾನೆ.

 

LEAVE A REPLY