ಇಂತಹ ವಿಧ್ವಂಸಕ ರಾಜಕೀಯ ಬೇಕಾ

ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಕೌಟುಂಬಿಕ ಕಲಹ ವಾಕರಿಕೆ ಹುಟ್ಟಿಸುವಂತಿದೆ  ಆ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಅಖಿಲೇಶ್ ಯಾದವ್ ತಮ್ಮ ರಕ್ತ ಸಂಬಂಧವನ್ನೇ ಮರೆತು ಪರಸ್ಪರ ಬೆಕ್ಕು ನಾಯಿಗಳಂತೆ ಕಚ್ಚಾಡುತ್ತಾ ಒಬ್ಬರು ಮತ್ತೊಬ್ಬರನ್ನು ಉಚ್ಛಾಟಿಸುತ್ತಾ ಜನರಿಗೆ ಪುಕ್ಕಟೆ ಮನೋರಂಜನೆ ನೀಡುತ್ತಿದ್ದಾರೆ  ಈ ಹಾಳು ರಾಜಕಾರಣ ರಕ್ತಸಂಬಂಧವನ್ನೇ ಅಳಿಸಿ  ಪರಸ್ಪರ ದ್ವೇಷಾಸೂಯೆಯನ್ನು ಕಾರುವಂತೆ ಮಾಡುತ್ತಿದೆ
ಇಂತಹ ಹಲವಾರು ಉದಾರಣೆ ಎಲ್ಲ ಪಕ್ಷಗಳಲ್ಲೂ ಕಾಣ ಸಿಗುತ್ತಿವೆ  ಚುನಾವಣೆಗಳಲ್ಲಿ ಅಪ್ಪನ ವಿರುದ್ಧ ಮಗ  ಮಗನ ವಿರುದ್ಧ ಅಪ್ಪ  ಹೆಂಡತಿ ವಿರುದ್ಧ ಗಂಡ  ಗಂಡನ ವಿರುದ್ದ ಹೆಂಡತಿ  ಹೀಗೆ ಎಲ್ಲ ಸಂಬಂಧಗಳನ್ನು ಮೀರಿ ಸ್ಪರ್ಧೆ ನಡೆಯುವುದು ಸಾಮಾನ್ಯವಾಗಿ ಹೋಗಿದೆ  ಇಂತಹ ಅನಾರೋಗ್ಯಕರ ಬೆಳವಣಿಗೆಗಳಿಂದ ಅನೇಕ ಪ್ರತಿಷ್ಠಿತ ಕುಟುಂಬಗಲು ಹಾಳಾಗುತ್ತಿವೆ  ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ತೀವ್ರ ರೀತಿಯ ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮ ಹಿರಿಯ ಪುತ್ರ ಕುಮಾರ್ ಬಂಗಾರಪ್ಪನವರ ಜತೆ ವರ್ಷಾನುಗಟ್ಟಲೆ ಮಾತು ಬಿಟ್ಟಿದ್ದರು  ಬಂಗಾರಪ್ಪ ನಿಧನರಾದಾಗ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಲೂ ಕುಮಾರ ಬಂಗಾರಪ್ಪನವರಿಗೆ ಸಾಧ್ಯವಾಗಲಿಲ್ಲ  ರಾಜಕೀಯ ಭಿನ್ನಾಭಿಪ್ರಾಯಗಳು ಕೇವಲ ಕುಟುಂಬಗಳಿಗೆ ಸೀಮಿತವಾಗದೆ  ಊರು  ಕೇರಿ  ಕೊನೆಗೆ ಇಡೀ ದೇಶವನ್ನೇ ವ್ಯಾಪಿಸಿ ಘೋರ ಪರಿಣಾಮ ಬೀರುವ ಸಾಧ್ಯತೆ ಇದೆ  ಆದರಿಂದ ಅನೇಕ ಬಾರಿ ಈ ಹಾಳು ರಾಜಕೀಯ ಬೇಕೇ ಎಂಬ ಪ್ರಶ್ನೆ ಅನೇಕ ರಾಜಕಾರಣಿಗಳನ್ನು ಕಾಡುತ್ತಿರಬೇಕಲ್ಲವೇ

  • ರಜತ್  ಯೆಯ್ಯಾಡಿ  ಮಂಗಳೂರು