ನೀರು ವ್ಯರ್ಥ ಮಾಡುವುದು ಬೇಡ

ಜಗತ್ತಿನ ಎಲ್ಲೆಡೆ ನೀರಿನ ಕೊರತೆ ಉಂಟಾಗುತ್ತಿದ್ದು ನಮ್ಮ ದೇಶ ಹಾಗೂ ನಮ್ಮ ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ಇಂತಹ ಸಮಯದಲ್ಲಿ ನೀರನ್ನು ಸದ್ಬಳಕೆ ಮಾಡುವ ಅಗತ್ಯ ಹೆಚ್ಚಾಗಿದೆ. ಮದುವೆ ಮನೆಗಳಲ್ಲಿ ಊಟದೊಂದಿಗೆ ಕುಡಿಯುವ ನೀರಿನ ಬಾಟಲುಗಳನ್ನರಿಸುವುದೂ ರೂಢಿಗೆ ಬಂದಿದ್ದು  ಊಟ ಮಾಡುವಾಗ ಜನರು ಬಾಟಲಿಯ ನೀರನ್ನು ಸಂಪೂರ್ಣ ಕುಡಿಯದೇ ಊಟದ ಟೇಬಲ್ ಮೇಲೆಯೇ ಬಿಟ್ಟು ಹೋಗುವುದರ ಮೂಲಕ ನೀರನ್ನು ವ್ಯರ್ಥ ಮಾಡುತ್ತಾರೆ.
ಅದಕ್ಕೆ ಬದಲಾಗಿ ಊಟದ ಕೊನೆಯಲ್ಲಿ ಎದ್ದು ಹೋಗುವಾಗ ಬಾಟಲಿಯಲ್ಲಿ ಉಳಿದ ನೀರನ್ನು ತೆಗೆದುಕೊಂಡು ಹೋಗಿ ಕೈ ತೊಳೆಯಬಹುದು. ಇಲ್ಲವೇ ಉಳಿದ ನೀರನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಕುಡಿಯಲು ಉಪಯೋಗಿಸುವ ಮೂಲಕ ನೀರಿನ ಸದ್ಬಳಕೆ ಮಾಡಬಹುದಲ್ಲವೇ? ಹೀಗೆ ಉಳಿಸಿದ ನೀರೇ ಹಲವು ಸಹಸ್ರ ಲೀಟರ್ ಆಗಬಹುದು. ನೀರನ್ನು ಈ ರೀತಿ ಉಳಿಸುವ ಮೂಲಕ ನಾವು ಹೊಸ ಭಾಷ್ಯ ಬರೆಯಬಹುದಲ್ಲವೇ ?

  • ಎಚ್ ಪಿ ಪಡುಪಣಂಬೂರು