ಪಾರ್ಸೆಲ್ ತಿಂಡಿಗಳಿಗೆ ರದ್ದಿ ಪೇಪರ್ ಬಳಸದಿರಿ

ಪೇಟೆಯಲ್ಲಿನ ಹೋಟೆಲುಗಳಲ್ಲಿ ಕರಿದ ತಿಂಡಿಗಳೂ ಸೇರಿದಂತೆ ತಿನ್ನುವ ಯಾವುದೇ ಪದಾರ್ಥವನ್ನು ಹಳೆ ಪತ್ರಿಕೆಗಳಲ್ಲಿ ಕಟ್ಟಿ ಕೊಡುವುದು ಸಾಮಾನ್ಯ ಎಂಬಂತಾಗಿದೆ. ಪತ್ರಿಕೆಗಳ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಅಪಾಯಕಾರಿ ರಾಸಾಯನಿಕಗಳಿರುತ್ತವೆ  ಇದು ತಿಂಡಿಗಳ ಜೊತೆ ಹೊಟ್ಟೆ ಸೇರಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು  ಆದ್ದರಿಂದ ಗೂಡಂಗಡಿ  ಹೋಟೆಲ್  ರಸ್ತೆ ಬದಿ ಅಂಗಡಿಗಳ ಮಂದಿ ಪಾರ್ಸೆಲ್ ಕಟ್ಟಿ ಕೊಡುವಾಗ ನ್ಯೂಸ್ ಪೇಪರ್ ಬಳಸದಂತೆ ನಿರ್ಬಂಧ ಹೇರಲಿ

  • ಚೇತನ್ ಶೆಟ್ಟಿ  ಕಡಿಯಾಳಿ  ಉಡುಪಿ