ಇಂಗ್ಲೆಂಡ್ ತಂಡವನ್ನು ಹಗುರವಾಗಿ ಕಾಣಬೇಡಿ

ಭಾರತೀಯ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದು ಬೀಗುತ್ತಿದ್ದರೂ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೀಷ್ ಬ್ಯಾಟ್ಸಮನ್ನರು ಕೂಡಾ ಮೊದಲು ಬ್ಯಾಟಿಂಗ್ ನಡೆಸಿ ಭಾರತದ ಬೌಲರುಗಳನ್ನು ಸರಿಯಾಗಿ ದಂಡಿಸಿದ್ದರು. ಅದಲ್ಲದೆ ಈ ಬಾರಿಯ ಇಂಗ್ಲೆಂಡ್ ತಂಡದಲ್ಲಿ ಟ್ವೆಂಟಿ-20 ಪಂದ್ಯಗಳಲ್ಲಿ ಆಡಿ ಅನುಭವ ಹೊಂದಿರುವ ಯುವ ಆಟಗಾರರೇ ತುಂಬಿಕೊಂಡಿರುವಾಗ ಗುರುವಾರದಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತಿರುಗಿ ಬೀಳುವುದು ಖಂಡಿತಾ. ಭಾರತ ಇಂಗ್ಲೆಂಡ್ ತಂಡವನ್ನು ಕೀಳಂದಾಜಿಸಿದ್ದೇ ಆದರೆ ಸೋಲು ತಪ್ಪಿದ್ದಲ್ಲ. ಯಾವುದೇ ತಂಡವನ್ನು ಕೀಳಂದಾಜಿಸದೆ ಆಡಬೇಕೆಂಬ ಸತ್ಯ ಭಾರತೀಯರು ಕಲಿಯಬೇಕು.
ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 350 ರನ್ ಕಲೆ ಹಾಕಿದ್ದಾಗಲೇ ಮೇಲುಗೈ ಸಾಧಿಸಿತ್ತು. ಟೀಮ್ ಇಂಡಿಯಾ ಗುರಿ ಬೆನ್ನಟ್ಟುವ ಧಾವಂತದಲ್ಲಿ ಎಡವಿದಾಗ ಸೋಲು ಖಂಡಿತಾ ಎಂದು ಅಂದವರೇ ಹೆಚ್ಚು. ಆದರೆ ನಾಯಕ ಕೊಹ್ಲಿ, ಜಾಧವ್ ಸಮಯೋಚಿತ, ಕೆಚ್ಚದೆ ಆಟದಿಂದ ಇಂಗ್ಲೆಂಡ್ ಎದುರಿನ ಮೂರು ಏಕದಿನ ಪಂದ್ಯಗಳಲ್ಲಿ 1-0 ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಆದ್ದರಿಂದ ಯಾವುದೇ ತಂಡಕ್ಕೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ

  • ಅಶೋಕ್ ಶೆಟ್ಟಿ  ಸಾಸ್ತಾನ