ಬಾಣಂತಿಯರ ಆಹಾರದ ಪ್ರಮಾಣ ಕಡಿತಗೊಳಿಸದಿರಿ

ರಾಜ್ಯ ಸರಕಾರದ ಅಧೀನದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭೀಣಿಯರಿಗೆ ಮತ್ತು ಬಾಣಂತಿಯರಿಗೆ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ವಿತರಿಸುತ್ತಿರುವುದು ಸಂತೋಷದ ವಿಷಯ. ಆದರೆ ಇತ್ತೀಚೆಗೆ ಅಂಗನವಾಡಿ ಕೇಂದ್ರಗಳಿಂದ ಸರಬರಾಜು ಆಗುವ ಗರ್ಭೀಣಿ ಆಹಾರ ಪ್ರಮಾಣ ಕುಸಿಯುತ್ತಿರುವುದು ಬೇಸರ ತಂದಿದೆ. ಈ ಬಗ್ಗೆ ಅಂಗನವಾಡಿ ಕಾರ್ಯಕತೆಯರನ್ನು ಕೇಳಿದರೆ ಇಲಾಖೆಯವರು ನಮಗೆ ಎಷ್ಟು ವಿತರಿಸುತ್ತಿದ್ದಾರೋ ಅಷ್ಟನ್ನೇ ನಾವುಗಳು ಸಹ ನೀಡುತ್ತಿರುವುದು ಎಂದು ಉತ್ತರಿಸುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗರ್ಭೀಣಿಯರಿಗೆ ಮೊದಲಿನಷ್ಟು ಆಹಾರ ಸರಬರಾಜು ಮಾಡಬೇಕೆಂದು ವಿನಂತಿ.

  • ಕುಮಾರಿ ಸುಕನ್ಯಾ ಕೋಟ್ಯಾನ್, ಯೆಯ್ಯಾಡಿ