ಮೇಲೆ ವಿದ್ಯುತ್ ತಂತಿ ನೋಡಿ ಕೆಳಗೆ ಗಿಡ ನೆಡಿ

ಪರಿಸರದ ಮೇಲೆ ಕಾಳಜಿ ಇಟ್ಟುಕೊಂಡು, ಸಮಾಜಮುಖಿ ಚಿಂತನೆಯ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತವೆ. ಇದು ಸಂತೋಷದ ವಿಚಾರ. ಆ ಸಂದರ್ಭದಲ್ಲಿ ಸಂಘಟಕರು ಸಾರ್ವಜನಿಕ ಸ್ಥಳ, ರಸ್ತೆಯ ಬದಿಗಳನ್ನು ಗಿಡ ನೆಡಲು ಆಯ್ಕೆ ಮಾಡಿಕೊಳ್ಳುತ್ತಾರೆ.
ಆದರೆ ಇವರುಗಳು ದೂರ ದೃಷ್ಟಿಕೊನ ಚಿಂತನೆ ಮಾಡುದಿಲ್ಲ, ಮುಂದಿನ ಭಾದಕಗಳ ಬಗ್ಗೆ ಯೋಚಿಸುದಿಲ್ಲ, ಹಾಗಾಗಿ ಇವರ ಗಿಡ ನೆಡುವ ಕಾರ್ಯ ಸಫಲವಾಗುವುದಿಲ್ಲ. ಇವರು ಗಿಡಗಳ ನೆಡುವಾಗ, ರಸ್ತೆ ಅಂಚಿನಿಂದ ಹಾದು ಹೋಗುವ ವಿದ್ಯುತ್ ಸರಾಬುರಾಜು ತಂತಿಗಳ ಕೆಳ ಭಾಗಕ್ಕೆ, ಗಿಡಗಳನ್ನು ರಸ್ತೆ ಉದ್ದಕ್ಕೂ ಸಾಲಾಗಿ ನಾಟಿ ಮಾಡುತ್ತಾರೆ.
ಗಿಡಗಳು ಸ್ವಲ್ಪ ವರ್ಷಗಳ ನಂತರ, ಮರಗಳಾಗಿ ಮಾರ್ಪಾಡಾಗುತ್ತವೆ. ಅದರ ರಂಬೆ-ಕೊಂಬೆಗಳು ಮೆಲ್ಭಾಗದ ವಿದ್ಯುತ್ ತಂತಿಗಳಿಗೆ ಸ್ಪರ್ಶಗೊಳ್ಳುತ್ತದೆ. ಇದರಿಂದ ವಿದ್ಯುತ್ ನಷ್ಟವಾಗುತ್ತದೆ. ಮತ್ತು ಗಾಳಿಯ ಒತ್ತಡಕ್ಕೆ ಮರದ ರಂಬೆಗಳು ಅಲುಗಾಡುದರ ಪರಿಣಾಮ, ತಂತಿಗಳು ಒಂದಕ್ಕೊಂದು ಘರ್ಷಣೆಗೊಂಡು ವಿದ್ಯುತಿನಿಂದ ಅನಾಹುತಗಳು ಸಂಭವಿಸುತ್ತವೆ. ಆದ ಕಾರಣ ಮುನ್ನೇಚ್ಚರಿಕೆಯ ಕ್ರಮವಾಗಿ ಮೆಸ್ಕಾಂನವರು, ಮರಗಳ ಶಿರ ಭಾಗಗಳನ್ನು ಕಟಾವು ಮಾಡುತ್ತಾರೆ. ಮರ ಕಟಾವು ಮಾಡಿದರಿಂದ ಕೆಲವೊಮ್ಮೆ ಬಿಸಿಲ ಧಗೆಗೆ ತುತ್ತಾಗಿ, ಮರ ಚಿಗುರದೆ ಸಾವು ಕಾಣುವುದುಂಟು.
ಹಾಗಾಗಿ ಸಂಘ-ಸಂಸ್ಥೆಗಳು ತಮ್ಮ ಉದ್ದೇಶಿತ ವನಮಹೋತ್ಸವ ಕಾರ್ಯಕ್ರಮ, ಕಾರ್ಯರೂಪಕ್ಕೆ ತರುವಾಗವಿದ್ಯುತ್ ಕಂಬಗಳಿಂದ ಹಾದು ಹೋಗುವ ತಂತಿಗಳಿಂದ ತಪ್ಪಿಸಿ ಗಿಡ ನಾಟಿ ಮಾಡುವುದು ಉತ್ತಮ. ಇದರಿಂದ ಗಿಡಗಳು ಯಾವೊಂದು ತೊಂದರೆ ಕೊಡದೆ, ಮತ್ತು ಗಿಡಗಳು ತೊಂದರೆ ಅನುಭವಿಸದೆ ಬೆಳೆಯುತ್ತವೆ

  • ತಾರಾನಾಥ್ ಮೇಸ್ತ ಶಿರೂರು