ಕ್ರೈಸ್ತ ಜನಾಂಗವನ್ನು ಕಡೆಗಣಿಸದಿರಿ

ಹಲವಾರು ವರ್ಷಗಳಿಂದ ರಾಜ್ಯ ಹಾಗೂ ಕೇಂದ್ರದಲ್ಲಿ ಚುನಾವಣೆ ನಡೆಯುತ್ತಾ ಬಂದಿದೆ. ಅಸೆಂಬ್ಲಿ ಹಾಗೂ ಲೋಕಸಭೆಗೆ ಚುನಾವಣೆ ನಡೆದು ಯಾವ ಯಾವ ಪಕ್ಷಕ್ಕೆ ಬಹುಮತ ಲಭಿಸುತ್ತದೆಯೋ ಆ ಪಕ್ಷ ಆಡಳಿತ ನಡೆಸುತ್ತಿದೆ. ಕ್ರೈಸ್ತ ಧರ್ಮದ ಮುಖಂಡರು ಹೆಚ್ಚಿನವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು, ಬೆರಳೆಣಿಕೆಯಷ್ಟು ಮಂದಿ ಮಾತ್ರ ಇತರ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುತ್ತಾ ಬಂದಿದೆ. ಆದರೆ ಕ್ರೈಸ್ತ ಧರ್ಮಿಯರೂ ರಾಜಕೀಯದಲ್ಲಿ ಬಹಳ ಆಸಕ್ತಿ ವಹಿಸಿದರೂ ಮುಂದಾಳುತನ ವಹಿಸಲು ಹಿಂದೆ ಬಿದ್ದಿದ್ದಾರೆ. ಮುಂದಿನ ಅಸೆಂಬ್ಲಿ ಹಾಗೂ ಲೋಕಸಭೆ ಚುನಾವಣೆ ಸ್ಪರ್ಧಿಸಲು ಆಸಕ್ತಿ ಇರುವ ಅರ್ಹ ರಾಜಕೀಯ ಮುಖಂಡರಿಗೆ ಚುನಾವಣೆಯಲ್ಲಿ ಯಾವುದೇ ಪಕ್ಷದಲ್ಲಿ ನಿಲ್ಲಲು ಆಸಕ್ತಿ ಇರುವ ಕ್ರೈಸ್ತ ಯುವಕರಿಗೆ ಸ್ಥಾನ ಕಲ್ಪಿಸಿ ಕೊಡಿ. ಇದರಿಂದ ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಬಂದಲ್ಲಿ ಉತ್ತಮ ಆಡಳಿತ ಅಭಿವೃದ್ಧಿ ಜನಸೇವೆ ಯಾವುದೇ ಕೆಲಸ ಕಾರ್ಯಗಳು ಆಗಬೇಕಾದಲ್ಲಿ ತಕ್ಷಣ ಮಾಡಿಕೊಡುವ ಪುಣ್ಯ ಕಾರ್ಯವು ಲಭಿಸಿ ಸಂಪೂರ್ಣ ಹೆಸರು ಬಂದಂತಾಗುವುದು  ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಕ್ಷೇತ್ರದಲ್ಲಿ ಅನುಭವವಿರುವ ಆಡಳಿತ ನಡೆಸಲು ಸಮರ್ಥವಿರುವ ಜನಸೇವೆ ಸಮಾಜ ಸೇವೆಯ ಮುಖಾಂತರ ಹೆಸರು ಗಳಿಸಿದವ ಕ್ರೈಸ್ತಧರ್ಮೀಯರಿಗೆ ಕೆಲವು ಸೀಟುಗಳಾದರೂ ಸಿಗುವಂತಾಗಲಿ

  • ಅರ್ಥರ್ ಮೆಂಡೋನ್ಸಾ  ಪುತ್ತೂರು