ನೋಟು ಅಮಾನ್ಯ ಖಂಡಿಸಿ ದ ಕ ಕಾಂಗ್ರೆಸ್ ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ನೋಟು ಅಪಮೌಲ್ಯಗೊಳಿಸಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಈ ಸಂದರ್ಭ ಮಾತನಾಡಿದ ಸಚಿವ ರಮಾನಾಥ ರೈ, “ಪ್ರಧಾನಿ ನರೇಂದ್ರ ಮೋದಿ ನೋಟನ್ನು ಬ್ಯಾನ್ ಮಾಡಿದ ಬಳಿಕ ಎಷ್ಟು ಕಪ್ಪು ಹಣವನ್ನು ಬ್ಯಾಂಕಿಗೆ ಬಂದಿದೆ ಎನ್ನುವುದನ್ನು ದೇಶದ ಜನತೆಗೆ ತಿಳಿಸಲಿ. ನರೇಂದ್ರ ಮೋದಿಗೆ ಈ ದೇಶದ ಬಡವರ ಕಷ್ಟ ಗೊತ್ತಿಲ್ಲ. ವಿದೇಶದಿಂದ ಕಪ್ಪು ಹಣ ತರುತ್ತೇವೆ, ಬಡವರಿಗೆ ಹಂಚುತ್ತೇವೆ ಎಂದರು. ದೇಶದ ಜನರಲ್ಲಿ ಭ್ರಮೆ ಮೂಡಿಸುವ ಕೆಲಸವನ್ನು ಬಿಜೆಪಿ ಮೂಡಿಸಿ ಜನತೆ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲೂ ಪ್ರತಿಭಟನೆ

ಉಡುಪಿ : ಶನಿವಾರ ಮಣಿಪಾಲ ಡೀಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತಾಡಿದ ಜಿಲ್ಲಾ ಉಸ್ತುವಾರಿ ಪ್ರಮೋದ್, “ಮೋದಿ ಸರಕಾರದ ನೋಟ್ ಬ್ಯಾನಿಂದ ಜನಸಾಮಾನ್ಯರು ಹಾಗೂ ರಾಜ್ಯ ಸರಕಾರದ ಬೊಕ್ಕಸಕ್ಕೆ ಬಲವಾದ ಏಟು ಬಿದ್ದಿದೆ. ಜನಸಾಮಾನ್ಯರ ಆದಾಯ ಏರಿಲ್ಲ. ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದೆ” ಎಂದರು.