ಮಾನ್ಯತಾಳ ಪಾತ್ರದಲ್ಲಿ ದಿಯಾ ಮಿರ್ಜಾ

ನಟಿ ಕಮ್ ಪ್ರೊಡ್ಯೂಸರ್ ದಿಯಾ ಮಿರ್ಜಾ ಮದುವೆಯಾದ ನಂತರ ಯಾವ ಚಿತ್ರದಲ್ಲೂ ನಟಿಸಿಲ್ಲ. ಇದೀಗ ಆಕೆ ಮತ್ತೆ ಬಣ್ಣ ಹಚ್ಚಲು ತಯಾರಾಗುತ್ತಿದ್ದಾಳೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಂಜಯ್ ದತ್ ಜೀವನಾಧರಿತ ಚಿತ್ರದಲ್ಲಿ ದಿಯಾ ಮಿರ್ಜಾ ಸಂಜಯ್ ಪತ್ನಿ ಮಾನ್ಯಾತಾ ದತ್ ಪಾತ್ರದಲ್ಲಿ ಅಭಿನಯಿಸಲಿದ್ದಾಳೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಬಹಿರಂಗ ಪಡಿಸಿದ್ದಾರೆ.
ಈ ಚಿತ್ರದಲ್ಲಿ ಸಂಜಯ್ ದತ್ ಕಲರ್ ಫುಲ್ ವ್ಯಕ್ತಿತ್ವ ಅನಾವರಣಗೊಳ್ಳಲಿದೆ. ಜೊತೆಗೇ ಸಂಜಯಗೆ ಅವರ ಅಪ್ಪ ಸುನಿಲ್ ದತ್ ಜೊತೆಗಿರುವ ಕೆಮೆಸ್ಟ್ರಿಯೂ ಹೈಲೈಟಾಗಲಿದೆಯಂತೆ. ಅಂದ ಹಾಗೆ ಸುನಿಲ್ ದತ್ ಪಾತ್ರದಲ್ಲಿ ಪರೇಶ್ ರಾವಲ್ ನಟಿಸಲಿದ್ದಾರೆ. ರಣಬೀರ್ ಕಪೂರ್ ಸಂಜಯ್ ದತ್ ಆಗಿ ಅಭಿನಯಿಸಲಿದ್ದು ಈಗ ಅದಕ್ಕಾಗಿ ರಣಬೀರ್ ಭಾರೀ ತಯಾರಿ ನಡೆಸುತ್ತಿದ್ದಾನೆ.
ದಿಯಾ ಮಿರ್ಜಾ ಸಂಜಯ್ ದತ್ ಜೊತೆ `ಲಗೇ ರಹೋ ಮುನ್ನಾ ಭಾಯಿ’ `ಪರಿಣಿತಾ’ `ಶೂಟೌಟ್ ಅಟ್ ಲೋಕಂಡ್ವಾಲಾ’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಳು. ಈಗ ಸಂಜಯ್ ಪತ್ನಿಯ ರೋಲಿನಲ್ಲಿ ಮಿಂಚುವ ಅವಕಾಶ ದಿಯಾಗೆ ಒದಗಿದೆ.