ಸಾಕ್ಷರತಾ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಎತ್ತಂಗಡಿ

ಸ್ಥಾನ ದುರುಪಯೋಗ ದೂರು

ನಮ್ಮ ಪ್ರತಿನಿಧಿ ವರದಿ

   ಕಾಸರಗೋಡು : ಔದ್ಯೋಗಿಕ ಸ್ಥಾನ ದುರುಪಯೋಗಪಡಿಸಿದ ದೂರಿನಂತೆ ಸಾಕ್ಷರತಾ ಮಿಷನ್‍ನ ಜಿಲ್ಲಾ ಕೋ-ಆರ್ಡಿನೇಟರ್ ಪಿ ಪ್ರಶಾಂತ್ ಕುಮಾರ್ ಎಂಬವರನ್ನು ಕಾಸರಗೋಡಿನಿಂದ ತಿರುವನಂತಪುರಕ್ಕೆ ವರ್ಗಾಯಿಸಲಾಗಿದೆ.

ಪರ್ಯಾಯವಾಗಿ ಕೆ ಶ್ಯಾಮಲಾಲ್ ಎಂಬವರನ್ನು ಇಲ್ಲಿನ ಜಿಲ್ಲಾ ಕೋ-ಆರ್ಡಿನೇಟರಾಗಿ ನೇಮಿಸಲಾಗಿದೆ. ಇವರು ಈತನಕ ರಾಜ್ಯ ಸಾಕ್ಷರತಾ ಮಿಷನ್ ಕಚೇರಿಯಲ್ಲಿ ಸೇವೆಸಲ್ಲಿಸುತ್ತಿದ್ದರು.

ಪ್ರಶಾಂತ್ ಕುಮಾರ ವಿರುದ್ಧ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಷೀರ್, ಉಪಾಧ್ಯಕ್ಷೆ ಶಾಂತಮ್ಮ ಪಿಲಿಫ್, ಹೊಸದುರ್ಗ ನಗರಸಭಾ ಅಧ್ಯಕ್ಷ ವಿ ವಿ ರಮೇಶನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ನೌಕರರು ದೂರು ನೀಡಿದ್ದರು.

ದೂರಿನ ಬಗ್ಗೆ  ಸಮಗ್ರ ತನಿಖೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.