ಉದ್ಯೋಗ ಅರಸಿ ಸೌದಿಗೆ ಹೋಗಿ ಕಷ್ಟಕ್ಕೀಡಾದವರು ಸದ್ಯವೇ ಬಿಡುಗಡೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅತ್ಯುತ್ತಮ ವೇತನ ಸಿಗುತ್ತದೆ ಎನ್ನುವ ಆಸೆಯಿಂದ ಉದ್ಯೋಗವನ್ನು ಅರಸಿಕೊಂಡು ದೂರದ ಸೌದಿ ಅರೇಬಿಯಾದ ದಮ್ಮಾಮ್ ನಗರಕ್ಕೆ ಮಂಗಳೂರಿನ ಏಜೆನ್ಸಿಯೊಂದರ ಮೂಲಕ ತೆರಳಿದ್ದ ಮೂವರು ಯುವಕರು ಅಲ್ಲಿ ಕಷ್ಟಕ್ಕೀಡಾದ ಘಟನೆ ಬೆಳಕಿಗೆ ಬಂದಿದೆ. ನರಕಯಾತನೆ ಅನುಭವಿಸುತ್ತಿರುವ ಯುವಕರ ನೆರವಿಗೆ ಸಮಾಜ ಸೇವಾ ಸಂಘಟನೆ ಇಂಡಿಯನ್ ಸೋಶಿಯಲ್ ಫೋರಂ ಮುಂದಾಗಿದ್ದು, ನೆರವು ನೀಡಿದೆ.

ಬೆಳ್ತಂಗಡಿಯ ಸಂತೋಷ್ ಶೆಟ್ಟಿ, ಉಡುಪಿಯ ಸಚಿನ್ ಕುಮಾರ್ ಮತ್ತು ಉಪ್ಪಿನಂಗಡಿಯ ಅಬ್ದುಲ್ ರಶೀದ್ ಉದ್ಯೋಗ ಅರಸಿಕೊಂಡು  2017ರ ಮಾರ್ಚ್ 24ರಂದು ಮಂಗಳೂರು ಮೂಲದ ವೀಸಾ ಏಜೆನ್ಸಿಯ ಮೂಲಕ ಮುಂಬೈ ಮಾರ್ಗವಾಗಿ ಸೌದಿಅರೇಬಿಯದ ದಮಾಮ್ ನಗರಕ್ಕೆ ಹೋಗಿದ್ದರು.

ಈ ಮೂವರು ಕೂಡಾ ಎಲೆಕ್ಟ್ರಿಶಿಯನ್ ವೀಸಾದಲ್ಲಿ ಸೌದಿ ಅರೇಬಿಯಕ್ಕೆ ತೆರಳಿದ್ದು ಇವರಿಗೆ ಅತ್ಯುತ್ತಮ ಸಂಬಳ ನೀಡುವ ಭರವಸೆ ನೀಡಲಾಗಿತ್ತು. “ಆದರೆ ಕಂಪೆನಿಯು ನಮಗೆ ಭರವಸೆ ನೀಡಿದ್ದ ಉದ್ಯೋಗವನ್ನಾಗಲೀ, ವಾಸ್ತವ್ಯ, ಆಹಾರ ಯಾವುದನ್ನೂ ನೀಡದೇ ಸತಾಯಿಸಿದೆ. ನಮ್ಮ ಬಲವಂತಕ್ಕೆ ಕಾಟಾಚಾರಕ್ಕೆ ಯಾವುದೋ ಕಂಪೆನಿಗೆ ಸಂದರ್ಶನದ ನೆಪದಲ್ಲಿ ಕರೆದುಕೊಂಡು ಹೋಗಿ ಸಂದರ್ಶನದಲ್ಲಿ ಫೇಲ್ ಆಗಿದ್ದೀರಿ ಎಂದು ನೆಪವೊಡ್ಡುತ್ತಿದ್ದರು. ನಮ್ಮ ವೀಸಾವನ್ನೂ ತೆಗೆದುಕೊಂಡು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಕೆಲವು ತಿಂಗಳು ಎಲ್ಲಿಯೋ ಒಂದು ಗೋಡೌನಿನಂತಹ ರೂಂನಲ್ಲಿ ಇದ್ದೆವು” ಎಂದು ಮೂವರು ಸಂತ್ರಸ್ತರು ಇದೀಗ ತಮ್ಮ ನೆರವಿಗೆ ಬಂದಿರುವ ಇಂಡಿಯನ್ ಸೋಶಿಯಲ್ ಫೆÇೀರಮ್ ಪ್ರತಿನಿಧಿ ನೌಶಾದ್ ಅವರಿಗೆ ತಿಳಿಸಿದ್ದಾರೆ.ಯುವಕರ ಬಿಡುಗಡೆಗೆ ಮುಂದಾಗಿರುವ ಇಂಡಿಯನ್

LEAVE A REPLY