ಲಾರಿ ಮುಷ್ಕರ : ಜಿಲ್ಲಾಡಳಿತ ಸಭೆ

ಮಂಗಳೂರು : ರಾಜ್ಯದಲ್ಲಿ ಲಾರಿ ಮಾಲೀಕರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ದ ಕ ಜಿಲ್ಲೆಯಲ್ಲಿ ಅಗತ್ಯ ಸೇವೆಗಳಿಗೆ ತೊಂದರೆಯಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.

ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಮತ್ತು ಸಾರಿಗೆ ಸಂಘಟನೆಗಳ ಸಭೆ ನಡೆಸಿ ಮಾತನಾಡಿದರು.

ಲಾರಿ ಮುಷ್ಕರದಿಂದ ಜಿಲ್ಲೆಯಲ್ಲಿ ಅವಶ್ಯ ಸಾಮಗ್ರಿಗಳ ಸರಬರಾಜಿನ ಮೇಲೆ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಆಹಾರ ಸಾಮಗ್ರಿ, ಪಡಿತರ ವಿತರಣೆ, ಗ್ಯಾಸ್ ಸರಬರಾಜು, ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ವಿವಿಧ ಸರಕು ಸರಬರಾಜು ಸಾಮಾನ್ಯವಾಗಿದೆ. ಹೀಗಿದ್ದರೂ ಯಾವುದೇ ದಿನಬಳಕೆ ವಸ್ತುಗಳ ಸರಬರಾಜು ವ್ಯತ್ಯಯವಾಗದಂತೆ ಗಮನಹರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

ಅಗತ್ಯ ಬಿದ್ದರೆ ಖಾಸಗಿ ಸಾರಿಗೆ ವಾಹನಗಳು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಅವರು ಸೂಚಿಸಿದರು.