ದಿಶಾ ಪಟಾನಿಗೆ ಕಾಂಡೋಮ್ ಪೂಜೆ !

ಇದಕ್ಕೆ ಹುಚ್ಚು ಎನ್ನಬೇಕೋ ಅಥವಾ ಯುವ ವಿದ್ಯಾರ್ಥಿಗಳ ಅತಿರೇಕ ಎನ್ನಬೇಕೋ ಗೊತ್ತಾಗುತ್ತಿಲ್ಲ. ಇಲ್ಲೊಂದು ಕಾಲೇಜಿನಲ್ಲಿ ವಿಚಿತ್ರ ರೀತಿಯಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದು ಮಾತ್ರ ಬಹಳ ಚೋದ್ಯವಾಗಿದೆ.

ದೆಹಲಿಯ ಹಿಂದೂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ಲವರ್ಸ್ ಡೇ ದಿನದಂದು ಒಂದು ಮರಕ್ಕೆ ಪೂಜೆ ಮಾಡ್ತಾರೆ, ಮರವನ್ನು ಬಹಳ ಭಕ್ತಿಯಿಂದ ಪೂಜಿಸುವ ವಿದ್ಯಾರ್ಥಿಗಳು ಪ್ರತಿ ವರ್ಷ ಒಬ್ಬೊಬ್ಬ ಹಾಟ್ ನಟಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಆಯ್ಕೆ ಮಾಡಿಕೊಳ್ಳುವ ಹೀರೋಯಿನ್ನಿಗೆ `ದಮ್ದಾಮಿ ಮಾಯ್’ ಎಂದು ಕರೆಯುತ್ತಾರೆ.

disha condom

ವಾಲೈಂಟೆನ್ ಡೇ ದಿನ ನಡೆಯುವ ಪೂಜೆಯಲ್ಲಿ ಪಾಲ್ಗೊಂಡರೆ ಆರು ತಿಂಗಳೊಳಗೆ ಅವರಿಗೆ ಒಳ್ಳೆಯ ಗರ್ಲ್ ಫ್ರೆಂಡ್ ಸಿಗುತ್ತಾರೆ ಎಂದು ವಿದ್ಯಾರ್ಥಿಗಳು ನಂಬುತ್ತಾರೆ, ಅಷ್ಟೇ ಅಲ್ಲ ಶೀಘ್ರವಾಗಿ ಸೆಕ್ಸ್ ಸುಖ ಸಿಗುತ್ತದೆ ಎಂದು ಭಾವಿಸುತ್ತಾರೆ. ಇಂತಹ ನಂಬಿಕೆಯಿಂದಲೇ ವಿದ್ಯಾರ್ಥಿಗಳು ಪ್ರತಿ ವರ್ಷ ಪೂಜೆ ಮಾಡ್ತಾರೆ.

ಪ್ರತಿ ವರ್ಷ ಫೆಬ್ರವರಿ 14ರಂದು ನಡೆಯುವ ಪೂಜೆಗಾಗಿ ಮೊದಲ ವರ್ಷದ ಪದವಿಯ ವಿದ್ಯಾರ್ಥಿನಿಯನ್ನು ಪುರೋಹಿತಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ವರ್ಜಿನ್ ಮರಕ್ಕೆ ಕಂಡೋಮ್ಸ್ ಹಾಕಿ ಅಲಂಕರಿಸಿ, ಅದರ ಸುತ್ತ ವಿದ್ಯಾರ್ಥಿಗಳು ಸುತ್ತುವರೆದು ಪೂಜೆ ಮಾಡುತ್ತಾರೆ. ತಮ್ಮ ಕೋರಿಕೆಯನ್ನು ತೀರಿಸುವಂತೆ ಬೇಡಿಕೊಳ್ಳುತ್ತಾರೆ.

ಈ ವರ್ಷ ಶೃಂಗಾರ ದೇವತೆಯಾಗಿ ದಿಶಾ ಪಟಾನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನರ್ಗಿಸ್ ಫಕ್ರಿ ಹೆಸರು ಕೂಡ ರೇಸಿನಲ್ಲಿ ಇತ್ತಂತೆ. ಆದರೆ ದಿಶಾ ಪಟಾನಿಯನ್ನು ಬಹುಮತದ ಮೇಲೆ ಆಯ್ಕೆ ಮಾಡಿಕೊಳ್ಳಲಾಯಿತಂತೆ. `ಲೋಫರ್’, `ಎಂ ಎಸ್ ಧೋನಿ’ ಸಿನಿಮಾದಲ್ಲಿ ನಟಿಸುವ ಮೂಲಕ ದಿಶಾ ಪಟಾನಿ ಮಾಡಲ್ ಆಗಿ ಅಷ್ಟೇ ಅಲ್ಲ, ಸಿನಿ ನಟಿಯಾಗಿ ಯುವಕರಲ್ಲಿ ಈಗ ಭಾರೀ ಫಾಲೋಯಿಂಗ್ ಹೆಚ್ಚಾಗಿದೆ.

ಅಂದ ಹಾಗೆ ಎಷ್ಟು ಜನರಿಗೆ ಈ ಪೂಜೆಯಿಂದ ಗರ್ಲ್ ಫ್ರೆಂಡ್ ಸಿಕ್ಕಿದ್ದಾರೆ ಎನ್ನುವುದು ಮಾತ್ರ ಗೊತ್ತಾಗಿಲ್ಲ.