`ಅಮಿತಾಬ್-ಜಯಾ ನಡುವೆ ವಿರಸ, ಬೇರೆ ಬೇರೆಯಾಗಿದ್ದಾರೆ’

ಮುಂಬೈ : ಬಿಗ್ ಬಿ ಅಮಿತಾಬ್ ಬಚ್ಚನ್ ದಂಪತಿ ಮೇಲೆ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಹಾಟ್ ಟಾಪಿಕ್ ಆಗಿದೆ. “ಅಮಿತಾಬ್ ಹಾಗೂ ಜಯಾಬಚ್ಚನ್ ಬೇರೆಯಾಗಿದ್ದಾರೆ” ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೇಳಿಕೆ ಈಗ ಬಹುಚರ್ಚಿತವಾಗುತ್ತಿದೆ.

“ನಾನು ಅಮಿತಾಬ್, ಜಯಾಬಚ್ಚನ್ ಅವರನ್ನು ಭೇಟಿ ಮಾಡುವ ವೇಳೆಗಾಗಲೇ ಅವರಿಬ್ಬರು ಬೇರೆಯಾಗಿ ವಾಸಿಸುತ್ತಿದ್ದರು, ಒಬ್ಬರು ಪ್ರತಿಕ್ಷದಲ್ಲಿದ್ದರೆ, ಇನ್ನೊಬ್ಬರು ಜಾನಕನಲ್ಲಿ ವಾಸವಾಗಿದ್ದರು, ಜಯ ಹಾಗೂ ಅಮಿತಾಬ್ ನಡುವೆ ವಿರಸ ಇರುವುದು ನಿಜ. ಅದಕ್ಕೆ ನಾನು ಜವಾಬ್ದಾರಿ ಅಲ್ಲ” ಎಂದು ತನ್ನ ಮೇಲೆ ಬರುತ್ತಿರುವ ವಿಮರ್ಶೆಗಳಿಗೆ ಪರೋಕ್ಷವಾಗಿ ಸಮಾಧಾನ ನೀಡಿದ್ದಾರೆ.

“ಅಮಿತಾಬ್, ಜಯಾ ಬಚ್ಚನ್ ಅವರನ್ನು ಸಮಾಜವಾದಿ ಪಕ್ಷ ಸೇರದಂತೆ ಎಚ್ಚರಿಕೆ ನೀಡಿದ್ದರು” ಎಂದು ಹಿಂದೆ ಅಮರ್ ಸಿಂಗ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು, ಮೊದಲು ಸ್ನೇಹಿತರಾಗಿದ್ದ ಅಮರ್ ಸಿಂಗ್ ಹಾಗೂ ಅಮಿತಾಬ್ ಆಮೇಲೆ ದೂರವಾದರು, ಅಮಿತಾಬ್ ಅವರೇ ಅಮರ್ ಸಿಂಗ್ ಅವರನ್ನು ದೂರವಿಟ್ಟರು ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅಮರ್ ಸಿಂಗ್ ಈಗ ನೀಡಿರುವ ಹೇಳಿಕೆ ಬಗ್ಗೆ ಬಿಗ್ ಬಿ ಫ್ಯಾಮಿಲಿ ಹೇಗೆ ಸ್ಪಂದಿಸುತ್ತೋ ಕಾದು ನೋಡಬೇಕಿದೆ.