ಸೈನಿಕರ ಕಷ್ಟ ಹೇಳಿಕೊಂಡವರ ಮೇಲೆ ಶಿಸ್ತುಕ್ರಮ ಸರಿಯಲ್ಲ

ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆನ್ನಲಾದ ಸಂಗತಿಗಳು ನಿಜಕ್ಕೂ ಆಘಾತಕಾರಿಯಾದವು. ಆದರೆ ತಮ್ಮ ಸಂಕಷ್ಟವನ್ನು ಹೇಳಿಕೊಂಡವರ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಬೆದರಿಸುವುದು ಸರಿಯಲ್ಲ. ಸೇನೆಯಲ್ಲಿ ದೂರು ಹೇಳಿಕೊಳ್ಳುವ ವ್ಯವಸ್ಥೆ ಇದೆಯಾದರೂ ತೀರಾ ಕೆಳಮಟ್ಟದ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬ ಹಿರಿಯ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದಾಗ ಪರಿಸ್ಥಿತಿ ಏನಾದೀತು ಎಂಬುದನ್ನು ಸಹಜವಾಗಿಯೇ ಊಹಿಸಬಹುದು. ಸೈನಿಕರ ಸಂಕಷ್ಟ ಆಲಿಸಿ ಹಿರಿಯ ಅಧಿಕಾರಿಗಳ ಪೈಕಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೇ ಹೊರತು ಅನಿವಾರ್ಯ ಸಂಕಟ ಹೇಳಿಕೊಂಡ ಯೋಧರ ವಿರುದ್ಧ ಅಲ್ಲ. ಆಹಾರಸಹಿತ ಸೂಕ್ತ ಸೌಲಭ್ಯಗಳನ್ನು ನೀಡಿದ ನಂತರವೂ ಈ ರೀತಿಯಲ್ಲಿ ಯಾರೂ ವರ್ತಿಸಲಾರರು ಎಂಬುದನ್ನು ಆಡಳಿತ ಅರ್ಥ ಮಾಡಿಕೊಳ್ಳಲಿ

  • ಎಂ ಛಾಯಪತಿ ಕುಂದಾಪುರ