ಮೋದಿ ಬಗ್ಗೆ ಭ್ರಮನಿರಸನ

ತಮಗಾದ ಕಷ್ಟಗಳನ್ನು ಪರಿಗಣಿಸದೇ ಮೋದಿಯವರು ಕಾಳಧನಿಕರನ್ನು ಮಟ್ಟಹಾಕುತ್ತಿರುವುದನ್ನು ಮೆಚ್ಚಿ ಬೆಂಬಲಿಸಿದವರು ಮುಂದಿನ ದಿನಗಳಲ್ಲಿ ಮೋದಿಯವರ ಬಗ್ಗೆ ಬೇಸರ ಪಡುವಂತೆ ಆಗಬಾರದು. ಆದ್ದರಿಂದ ಸರಕಾರ ಎಷ್ಟೇ ಒಳ್ಳೆಯ ಉದ್ದೇಶವಿಟ್ಟುಕೊಂಡು ನೋಟು ನಿಷೇಧ ಮಾಡಿದ್ದರೂ ಜನರ ತಾಳ್ಮೆಗೂ ಒಂದು ಮಿತಿಯಿದ್ದು ಅದನ್ನು ಪರೀಕ್ಷಿಸಲು ಸರಕಾರ ಹೋಗಬಾರದು
ಸಣ್ಣ ಮೊತ್ತದ ಹಣವನ್ನು ಬ್ಯಾಂಕಿನಲ್ಲಿಟ್ಟವರು  ನಿವೃತ್ತಿ ಜೀವನ ನಡೆಸುವವರು  ಸಣ್ಣಪುಟ್ಟ ವ್ಯವಹಾರ ಮಾಡುವವರು   ಮೊದಲಾದ ಮಂದಿ ಈ ನೋಟು ನಿಷೇಧದ ದೆಸೆಯಿಂದ ತಮಗೆ ಅಗತ್ಯವಿರುವಷ್ಟು ಹಣವನ್ನು ಪಡೆಯಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ  ಇದರ ನೇರ ಪರಿಣಾಮ ಮುಂದಿನ ಚುನಾವಣೆಗಳ ಮೇಲೆ ಆಗಿಯೇ ಆಗುತ್ತದೆ ಎಂಬುದನ್ನು ಸರಕಾರ ಅರಿಯಬೇಕು
ದೇಶದ ಜನರು ಮೋದಿಯವರ ಯೋಜನೆಗಳಿಗೆ ಬೆಂಬಲ ನೀಡಿದಂತೆ ಮೋದಿಯವರೂ ಕೂಡ ಅದೇ ರೀತಿ ಜನರ ಭಾವನೆಗಳಿಗೆ ಬೆಲೆ ನೀಡಬೇಕು. ತಮಗೆ ಆಗದವರ ವಿರುದ್ಧ ಸಿಬಿಐ ದಾಳಿ ನಡೆಸುತ್ತಿರುವ ಸರಕಾರ ನಡೆಯೂ ಪ್ರಶ್ನಾಹ್ರ್ನವಾಗಿದೆ
ಏಕೆಂದರೆ ಈಗ ಸಿಕ್ಕಿರುವ ಕಾಳಧನಿಕರೆಲ್ಲ ಬಹುತೇಕ ಮೋದಿಯವರ ವಿರೋಧ ಪಕ್ಷದವರೇ ಆಗಿದ್ದು ಆಳುವ ಕೇಂದ್ರ ಸರಕಾರದ ಯಾರೂ ಸಿಬಿಐ ದಾಳಿಗೆ ಸಿಕ್ಕಿಲ್ಲವೆಂದರೆ ಆಳುವ ಕೇಂದ್ರ ಸರಕಾರದ ಪಕ್ಷದವರೆಲ್ಲ ಸತ್ಯ ಹರಿಶ್ಚಂದ್ರರೆಂದು ಯಾರೂ ನಂಬಲು ಸಿದ್ಧರಿಲ್ಲ  ಹಾಗಾದರೆ ಕಾಳಧನಿಕರನ್ನು ಬುಡದಿಂದಲೇ ಚಿವುಟಿ ಹಾಕುವ ಮೋದಿಯವರ ಉದ್ದೇಶ ವಿಫಲವಾಗುವುದಲ್ಲದೇ  ಜನರಿಗೆ ಮೋದಿ ಸರಕಾರದ ಬಗ್ಗೆ ಅಪನಂಬಿಕೆ ಮೂಡಲು ಕಾರಣವಾಗುತ್ತದೆ  ಆದ್ದರಿಂದ ಜನವರಿ 1ರಿಂದಲೇ ಸರಕಾರ ರಿಸರ್ವ್ ಬ್ಯಾಂಕ್  ಈಗಿರುವ ಹಣ ಪಡೆಯುವ ಕೆಲವು ನಿರ್ಬಂಧಗಳನ್ನು ಸಡಿಲಿಸಬೇಕು. ಅದೇ ರೀತಿ ಎಟಿಎಂಗಳು ಸದಾ ತೆರೆದಿರುವಂತೆ ನೋಡಿಕೊಳ್ಳುವ ಮೂಲಕ ಜನರಲ್ಲಿ ನಮ್ಮ ಹಣ ನಮಗೆ ಸಿಗುತ್ತದೆಂಬ ಭರವಸೆ ಮೂಡಿಸುವ ಅಗತ್ಯವಿದೆ

  • ಸುಕೇಶ್ ಸುವರ್ಣ
    ಅಲಂಗಾರು ಮೂಡಬಿದ್ರೆ