ನಿರ್ದೇಶನದತ್ತ ಕಂಗನಾ

ಕಂಗನಾ ರನೌತ್ ಒಬ್ಬಳು ಪ್ರತಿಭಾವಂತ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೇ ಆಕೆ ಕಾಂಟ್ರವರ್ಸಿ `ಕ್ವೀನ್’ ಎನ್ನುವುದೂ ಅಷ್ಟೇ ಸತ್ಯ. ತಾನು ಎಬ್ಬಿಸುತ್ತಿರುವ ವಿವಾದಗಳಿಂದಾಗಿ ತನಗೆ ನಟಿಸುವ ಅವಕಾಶ ಸಿಗದಿದ್ದರೂ ಚಿಂತೆಯಿಲ್ಲ ಎಂದು ಓಪನ್ನಾಗಿಯೇ ಎಲ್ಲರಿಗೂ ಚಾಲೆಂಜ್ ಮಾಡುವುದರಲ್ಲಿಯೂ ಯಾವುದೇ ಹಿಂಜರಿಕೆ ತೋರದ ಕಂಗನಾ ಈಗ ನಿರ್ದೇಶಕಿ ಆಗಲು ಹೊರಟಿದ್ದಾಳೆ.

ಕಂಗನಾ ಮಕ್ಕಳ ಚಿತ್ರದ ಮೂಲಕ ನಿರ್ದೇಶಕಿಯ ಕ್ಯಾಪ್ ಧರಿಸಲಿದ್ದಾಳೆ. ಈಗಾಗಲೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿದ್ದು ಸಿನಿಮಾದ ಹೆಸರು `ತೇಜು’ ಎಂದಾಗಿದೆ. ಬಿಡುವಿದ್ದಾಗೆಲ್ಲ ಚಿತ್ರಕತೆ ಬರೆಯುತ್ತಾ ಉಳಿದ ತಯಾರಿಯನ್ನೂ ಆಕೆ ಮಾಡಿಕೊಳ್ಳುತ್ತಿದ್ದಾಳೆ. ಕಂಗನಾ ನಟಿಸಿರುವ `ಸಿಮ್ರನ್’ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಸದ್ಯ ಆ ಸಿನಿಮಾದ ಪ್ರಮೋಶನ್ನಿನಲ್ಲಿಯೂ ಆಕೆ ಬ್ಯೂಸಿಯಾಗಿದ್ದಾಳೆ. ಆ ಚಿತ್ರದ ನಂತರ `ಮಣಿಕರ್ಣಿಕಾ’ ಸಿನಿಮಾ ಶುರುವಾಗಲಿದೆ. ಅದರ ಶೂಟಿಂಗ್ ಮುಗಿಯುತ್ತಿದ್ದಂತೆ ಹೊಸ ಚಿತ್ರಕ್ಕೂ ಚಾಲನೆ ನೀಡಬಹುದು.