`ಉತ್ಸವ’ದ ಮೂಡಿನಲ್ಲಿ ದಿಗಂತ್

ದಿಗಂತ್ ಈಗ ಭಾರೀ ಹುಮ್ಮಸ್ಸಿನಲ್ಲಿದ್ದಾನೆ. ಅವನೀಗ ಮಲೆಯಾಳಂ ಸೂಪರ್ ಹಿಟ್ ಚಿತ್ರ `ಚಾರ್ಲಿ’ಯ ರಿಮೇಕಿನಲ್ಲಿ ನಟಿಸುತ್ತಿದ್ದು ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾನೆ.

ಮಲೆಯಾಳಂ `ಚಾರ್ಲಿ’ಯಲ್ಲಿ ದಲ್ಕರ್ ಸಲ್ಮಾನ್ ನಟಿಸಿದ್ದು ಆ ಚಿತ್ರ ಅವನಿಗೆ ತುಂಬಾ ಹೆಸರು ತಂದಿತ್ತು. ಈ ಚಿತ್ರದ ಬಗ್ಗೆ ದಿಗಂತ್ ಮಾತಾಡುತ್ತಾ “ಒರಿಜಿನಲ್ ಸ್ಕ್ರಿಪ್ಟ್ ತುಂಬಾ ಚೆನ್ನಾಗಿದ್ದು ಅದನ್ನು ನಾನು ಬಹಳ ಇಷ್ಟಪಟ್ಟಿದ್ದೇನೆ. ಈಗ ಕನ್ನಡಕ್ಕೆ ಹೊಂದುವ ರೀತಿಯಲ್ಲಿ ಚಿತ್ರದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು ಆ ಪಾತ್ರಕ್ಕೆ ನ್ಯಾಯ ಒದಗಿಸಲು ಬದ್ಧನಾಗಿದ್ದೇನೆ.” ಎನ್ನುತ್ತಾನೆ. ಈಗ ಸಿನಿಮಾದ ಶೂಟಿಂಗ್ ಚಿಕ್ಕಮಂಗಳೂರಿನಲ್ಲಿ ನಡೆಯುತ್ತಿದ್ದು ನಂತರ ಮಂಗಳೂರಿನಲ್ಲಿಯೂ ಕೆಲವು ಭಾಗ ಚಿತ್ರೀಕರಿಸುವ ಪ್ಲಾನಿನಲ್ಲಿದೆ ಚಿತ್ರತಂಡ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು ಹೊನ್ನಾವರ ಮೂಲದ ನ್ಯೂಜಿಲ್ಯಾಂಡ್ ಮಾಡೆಲ್ ಲತಾ ಹೆಗ್ಡೆ ದಿಗಂತಗೆ ಸಾಥ್ ನೀಡಲಿದ್ದಾಳೆ. ಹರ್ಷ ಪ್ರೈವೇಟ್ ಲಿಮಿಟೆಡ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಜಿ ಎನ್ ರುದ್ರೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ