ಸೋನು ಗೌಡ ಜೊತೆ ದಿಗಂತ್ ಡ್ಯೂಯೆಟ್

ದೂಧ್ ಪೇಡಾ ಎಂದೇ ಕರೆಯಲ್ಪಡುವ ಗುಳಿಕೆನ್ನೆಯ ನಟ ದಿಗಂತ್ ಮುಂದಿನ ಚಿತ್ರದಲ್ಲಿ ಸೋನುಗೌಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾನೆ. ಇವರಿಬ್ಬರೂ ಜೊತೆಯಾಗುತ್ತಿರುವುದು ನವ ನಿರ್ದೇಶಕ ಜೆ ಮಂಜುನಾಥ್ ಆಕ್ಷನ್ ಕಟ್ ಹೇಳಲಿರುವ `ಫಾರ್ಚ್ಯುನರ್’ ಎನ್ನುವ ಶೀರ್ಷಿಕೆ ಇರುವ ಚಿತ್ರಕ್ಕಾಗಿ.

ಇದೊಂದು ಕೌಟುಂಬಿಕ ಚಿತ್ರವಾಗಿದ್ದು ಇದರಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯವೂ ಸಾಕಷ್ಟು ಇರಲಿದೆ. ಈ ಚಿತ್ರದಲ್ಲಿ ದಿಗಂತ್ ಶಾಸಕರ ರೌಡಿ ಮಗನ ಪಾತ್ರದಲ್ಲಿ ನಟಿಸುತ್ತಿದ್ದಾನೆ.

`ಇಂತಿ ನಿನ್ನ ಪ್ರೀತಿಯ..’ ಚಿತ್ರದಲ್ಲಿ ಗಮನಸೆಳೆದ ಸೋನುಗೌಡ ಮತ್ತು ದಿಗಂತ್ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದು ಅವರ ಫೆÇೀಟೋ ಶೂಟ್ ಈಗಾಗಲೇ ಮುಗಿದಿದ್ದು, ಸದ್ಯವೇ ಚಿತ್ರೀಕರಣ ಶುರುವಾಗಲಿದೆ. ಚಿತ್ರೀಕರಣದ ಬಹುಭಾಗ ಬೆಂಗಳೂರಲ್ಲೇ ನಡೆಯಲಿದ್ದು ಹಾಡಿನ ಚಿತ್ರೀಕರಣವನ್ನು ಎಲ್ಲಿ ಮಾಡುವುದು ಎಂದು ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.