ನವೆಂಬರ್ 18ಕ್ಕೆ 69 ಭಿನ್ನಚೇತನರಿಗೆ ಯಾಂತ್ರೀಕೃತ ದ್ವಿಚಕ್ರ ವಾಹನ ವಿತರಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಶೇಷ ಸಾಮಥ್ರ್ಯದ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಯೋಜನೆ ಅಡಿಯಲ್ಲಿ ಜಿಲ್ಲೆಯ ಸುಮಾರು 69 ಮಂದಿ ಭಿನ್ನಚೇತನರಿಗೆ  ಯಾಂತ್ರೀಕೃತ ದ್ವಿಚಕ್ರ ವಾಹನಗಳು ನವೆಂಬರ್ 18ರಂದು ದೊರೆಯಲಿದೆ.

ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಅಂದು ನಡೆಯಲಿರುವ ಕರ್ನಾಟಕ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ವಾಹನ ಹಸ್ತಾಂತರಿಸಲಿದ್ದಾರೆ. 2016-17ರಲ್ಲಿ ಬಂದ 127 ಅರ್ಜಿಗಳ ಪೈಕಿ 69 ಮಂದಿ ಫಲಾನುಭವಿಗಳನ್ನು ಆರಿಸಲಾಗಿದೆ. ದೈಹಿಕ ಭಿನ್ನಚೇತನರಿಗೆ ನೆರವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು 2015 ರಲ್ಲಿ ಜಾರಿಗೊಳಿಸಲಾಗಿದೆ. ಮೊದಲ ವರ್ಷದಲ್ಲಿ ಈ ಖೋಟಾದಡಿಯಲ್ಲಿ ಜಿಲ್ಲೆಗೆ 20 ಯಾಂತ್ರೀಕೃತ ದ್ವಿಚಕ್ರ ವಾಹನಗಳನ್ನು ನಿಗದಿಗೊಳಿಸಿತ್ತು.