ಪ್ರವಾಸಿ ಆಸೀಸರನ್ನು ಮಣಿಸಲು ನಡೆಸಿದ ಸ್ಪಿನ್ ಅಸ್ತ್ರ ಭಾರತ ತಂಡಕ್ಕೆ ಮುಳುವಾಯ್ತೇ

ಪ್ರವಾಸಿ ಆಸೀಸ್ ಮತ್ತು ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತೀಯರಿಗೆ ನೆರವಾಗಲೆಂದು ಅತಿಯಾದ ಸ್ಪಿನ್ ಪಿಚ್ ತಯಾರಿಸಬಾರದು ಎಂಬುದು ಈಗ ಅರಿವಿಗೆ ಬಂದಿರಬಹುದು. ಪುಣೆಯಲ್ಲಿ ಮುಗಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡಕ್ಕೆ ಸ್ಪಿನ್ನಿನಿಂದಲೇ ಆಸೀಸ್ ತಂಡ ತಕ್ಕ ಉತ್ತರ ನೀಡಿದೆ. ಯಾವುದೇ ಟೆಸ್ಟ್ ಪಂದ್ಯವಾದರೂ ಐದು ದಿನಗಳ ಆಟವಿರುವ ಟೆಸ್ಟ್ ಪಂದ್ಯ ಕೇವಲ ಎರಡೂವರೆ ದಿನಗಳಲ್ಲಿ ಮುಗಿಯುವಂತಿರಬಾರದು. ಹಾಗಾಗಿ ಸ್ಪರ್ಧಾತ್ಮಕ ಪಿಚ್ ರೂಪಿಸಬೇಕಾದುದು ಅತ್ಯವಶ್ಯ. ಅದು ಟೆಸ್ಟಿಗೆ ಹಿತಕಾರಿ

  • ದಿನೇಶ್ ಶೆಣೈ, ಮಂಗಳೂರು