ಧೋನಿ ಕ್ಯಾಪ್ಟನ್ ಸ್ಥಾನದಿಂದ ಬಲವಂತದಿಂದ ಕೆಳಗಿಳಿದರೇ ?

ಮಹೇಂದ್ರ ಸಿಂಗ್ ಧೋನಿ ಭಾರತದ ಸೀಮಿತ ಓವರುಗಳ ಕ್ರಿಕೆಟ್ ನಾಯಕ ಸ್ಥಾನದಿಂದ ಬಲವಂತದಿಂದ ಕೆಳಗಿಳಿಸಲ್ಪಟ್ಟರು ಎಂದು ಹೇಳಿಕೆಗಳು ಸಾಮಾಜಿ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಧೋನಿಯ ರಾಜ್ಯ ತಂಡ ಜಾರ್ಖಂಡ್ ರಜನಿ ಟ್ರೋಫಿ ಸೆಮಿ ಫೈನಲ್ಸನಲ್ಲಿ ಧೋನಿ ಉಪಸ್ಥಿತಿಯಿಲ್ಲದೆ ಸೋತಿರುವುದೇ ಧೋನಿಯ ನಾಯಕತ್ವಕ್ಕೆ ಕುತ್ತುಂಟಾಯಿತು ಎಂದು ಹೇಳಲಾಗುತ್ತಿದೆ.

ಬಿಸಿಸಿಐ ಜಂಟಿ ಕಾರ್ಯದರ್ಶಿ ಅದೇ ರೀತಿ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಘಟನೆಯ ಅಧ್ಯಕ್ಷರೂ ಆಗಿರುವ  ಅಮಿತಾಬ್ ಚೌದರಿ, ಭಾರತದ ಒಡಿಐ ಮತ್ತು ಟಿ20 ಕ್ರಿಕಟ್ ತಂಡಗಳ ನಾಯಕತ್ವಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದೇ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಲು ಕಾರಣ ಎಂದು ಬಿಹಾರ ಕ್ರಿಕೆಟ್ ಸಂಘದ ಕಾರ್ಯದರ್ಶಿ ಆದಿತ್ಯ ವರ್ಮಾ ಹೇಳಿದ್ದಾರೆ.

ಧೋನಿ ಸೆಮಿ ಫೈನಲ್ ಮ್ಯಾಚಲ್ಲಿ ಗುಜರಾತ್ ವಿರುದ್ದ ಆಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಚೌಧರಿ, ಇದರಿಂದಾಗಿ ಜಾರ್ಖಂಡಗೆ ಸುಮಾರು 123 ರನ್ನುಗಳ ಸೋಲಾಯಿತು ಎಂದು ಹೇಳಿದ್ದಾರೆ.

ಚೌದರಿ ಬಿಸಿಸಿಐ ಮುಖ್ಯ ಆಯ್ಕೆಗಾರ ಎಂಎಸ್‍ಕೆ ಪ್ರಸಾದರನ್ನು ಕರೆದು, ಧೋನಿಯ ಭವಿಷ್ಯ ಯೋಜನೆಗಳು ಉತ್ತಮವಾಗಿ ನಡೆಯಲಾರವು ಎಂದು ಹೇಳುವಂತೆ ಚೌಧರಿ ಹೇಳಿದ್ದಾರೆ ಎಂದು ಆದಿತ್ಯ ವರ್ಮಾ ಹೇಳಿದ್ದಾರೆ. ಈ ಮಾತಿನಿಂದ ನೊಂದ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಧೋನಿ ಕಳೆದ ವಾರ ಎಲ್ಲಾ ಮೂರು ಪ್ರಕಾರದ ಕ್ರಿಕೆಟ್ ಪಂದ್ಯಗಳ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿ, ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿ ಇಡೀ ಕ್ರಿಕೆಟ್ ಜಗತ್ತಿಗೆ ಆಶ್ಚರ್ಯವನ್ನು ಹುಟ್ಟಿಸಿದ್ದಾರೆ.

ಇದುವರೆಗೆ ಚೌಧರಿಯಾಗಲೀ ಅಥವಾ ಧೋನಿಯಾಗಲೀ ಆದಿತ್ಯ ವರ್ಮಾರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.