ಮಂಗಳೂರು ಸೆಂಟ್ರಲ್ ರೈಲ್ವೇ ಮುಂಭಾಗ ಧರಣಿ

ಮಂಗಳೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿ ಎಂದು ಒತ್ತಾಯಿಸಿ ದಕ್ಷಿಣ ರೈಲ್ವೇ ಎಂಪ್ಲಾಯಿಸ್ ಯೂನಿಯನ್(ಡಿಆರ್‍ಇಯು) ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ  ಮುಂಭಾಗದಲ್ಲಿ ಧರಣಿ ನಡೆಸಿತು.

ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಗುಮಾಸ್ತ ಹುದ್ದೆಗಳನ್ನು ಕೂಡಲೇ ತೆರವುಗೊಳಿಸಬೇಕು, ರೈಲ್ವೇ ಕಾಲನಿಯ ನಿವಾಸಿಗಳಿಗೆ ಭದ್ರತೆ ನೀಡಬೇಕು, ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಆಸ್ಪತ್ರೆ ವೆಚ್ಚವನ್ನು ಇಲಾಖೆ ಭರಿಸಬೇಕು, ರೈಲು ನಿಲ್ದಾಣದಲ್ಲಿ ಭಿಕ್ಷುಕರ ಹಾವಳಿಗೆ ತಡೆ ಹಾಕಬೇಕು, ಕಳ್ಳರ ಉಪಟಳ ಕೊನೆಗೊಳಿಸಬೇಕು, ಸಕಾಲಕ್ಕೆ ಮಂಗಳೂರು ನಗರ ಪಾಲಿಕೆ ನೀರು ಪೂರೈಕೆ ಮಾಡಬೇಕು, ಕಾಲನಿಯ ಏಳು ಬಾವಿಗಳಿಗೆ ಕಲುಷಿತ ನೀರು ಸೇರುತ್ತಿದ್ದು, ಅದನ್ನು ಸ್ವಚ್ಛತೆಗೊಳಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.