ಎಣ್ಮಕಜೆ ಪಂಚಾಯತು ಕಚೇರಿ ಮುಂಭಾಗದಲ್ಲಿ ಧರಣಿ

ಕಾಸರಗೋಡು : ಕುಡಿಯುವ ನೀರು ವಿತರಣೆ ಸಮರ್ಪಕ ರೀತಿಯಲ್ಲಿ ನಡೆಸಬೇಕು, ಅಸಮರ್ಪಕ ಪಿಂಚಣಿ ವಿತರಣೆ ಸರಿಪಡಿಸಬೇಕು, ಉದ್ಯೋಗ ಖಾತರಿ ವೇತನ ವಿತರಿಸಬೇಕು, ಪಂಚಾಯತ ಫಂಡ್ ಸರಿಯಾಗಿ ವಿನಿಯೋಗಿಸಬೇಕು ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ (ಎಂ) ಎಣ್ಮಕಜೆ ಕಾಟುಕುಕ್ಕೆ ಲೋಕಲ್ ಸಮಿತಿಗಳ ನೇತೃತ್ವದಲ್ಲಿ ಎಣ್ಮಕಜೆ ಪಂಚಾಯತ ಕಚೇರಿ ಬಳಿ ಧರಣಿ ನಡೆಸಲಾಯಿತು.