`ಭ್ರಷ್ಟ’ ಸಚಿವರಿಬ್ಬರ ರಾಜೀನಾಮೆ ನಿರಾಕರಿಸಿದ ಸೀಎಂ ಫಡ್ನವೀಸ್

ಮುಂಬೈ : ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವಸತಿ ಸಚಿವ ಪ್ರಕಾಶ್ ಮೆಹ್ತಾ ಮತ್ತು ಉದ್ದಿಮೆಗಳ ಸಚಿವ ಸುಭಾಷ್ ದೇಸಾಯಿ ವಿರುದ್ಧ ಮಹಾರಾಷ್ಟ್ರ ಸೀಎಂ ದೇವೇಂದ್ರ ಫಡ್ನವೀಸ್ ತನಿಖೆ ಪ್ರಕಟಿಸಿದ ಬೆನ್ನಲ್ಲೇ, ಈ ಇಬ್ಬರು ಇಬ್ಬರೂ ಸಚಿವರು ನಿನ್ನೆ ಸೀಎಂ ನಿವಾಸಕ್ಕೆ ತೆರಳಿ ರಾಜೀನಾಮ ಪತ್ರ ನೀಡಿದ್ದಾರೆ. ಆದರೆ ಇವರ ರಾಜೀನಾಮೆ ಅಂಗೀಕರಿಸಲು ನಿರಾಕರಿಸಿದ ಸೀಎಂ, “ಇಬ್ಬರೂ ವಿಚಾರಣೆ ಎದುರಿಸಿದರೆ ಸಾಕು, ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ” ಎಂದರು. “ರಾಜೀನಾಮೆ ಎಂಬುದು ನಾಟಕ. ಸೀಎಂ ಭ್ರಷ್ಟ ಸಚಿವರ ರಕ್ಷಿಸುವ ರಾಜಕೀಯ ನಾಟಕವಾಡುತ್ತಿದ್ದಾರೆ” ಎಂದು ವಿಪಕ್ಷಗಳು ಟೀಕಿಸಿವೆ.