ಮಾಜಿ ಪ್ರಧಾನಿ ದೇವೇಗೌಡರಿಗೆ ಈ ಪರಿಯ ಅಸಹನೆ ಸಾಧುವಲ್ಲ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ಮಾಡಿ ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೇ ಅಪರಾಧ ಎಂದು ಅಸಹನೆ ತೋಡಿಕೊಂಡಿದ್ದನ್ನು ಪತ್ರಿಕೆಯಲ್ಲಿ ಕಂಡಾಗ ತೀರಾ ಅಚ್ಚರಿಯಾಯಿತು ಗೌಡರಂಥ ಮುತ್ಸದ್ಧಿಗೆ ಈ ಪರಿಯ ಅಸಹನೆ ಖಂಡಿತಕ್ಕೂ ಸಾಧುವಲ್ಲ ಅವರು ರಾಜ್ಯ ರಾಜಕಾರಣವನ್ನು ಒಮ್ಮೆ ಹಿಂತಿರುಗಿ ನೋಡಬೇಕು ತಮ್ಮ ಮಗ ಎಚ್ ಡಿ ಕುಮಾರಸ್ವಾಮಿ ಅಂದು ರಾಜ್ಯದಲ್ಲಿ ಬಿಜೆಪಿ ಜತೆ ಸೇರಿ ಸರಕಾರ ರಚಿಸಿದಾಗ ಗೌಡರು ಮಹಾಮೌನಿಯಾಗಿದ್ದು ದೃತರಾಷ್ಟ್ರ ವ್ಯಾಮೋಹ ಎಂಬ ಅಪಖ್ಯಾತಿಗೆ ಗುರಿಯಾಗಬೇಕಾಗಿ ಬಂತು ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಭಿವೃದ್ಧಿಯ ಹೆಸರಿನಲ್ಲಿ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುವ ಹಾಗೂ ರೈತ ಕಾರ್ಮಿಕರನ್ನು ಅಲಕ್ಷಿಸುವ ನೀತಿ ಹೊಂದಿದೆ ರಾಜ್ಯದ ಮಹದಾಯಿ ಜಲವಿವಾದದ ಬಗ್ಗೆ ಮಹಾಮೌನ ಹಾಗೂ ಮಲತಾಯಿ ಧೋರಣೆ ತಳೆಯುತ್ತಾ ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಗುಪ್ತ ಅಜೆಂಡಾ ಸ್ವೀಕರಿಸಿದಂತಿದೆ ಇಂಥ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯರ ನಡೆ ಕೊಂಚ ಉಡಾಫೆಯಂತೆ ಕಂಡು ಬಂದರೂ ರಾಜ್ಯದಲ್ಲಿ ಬಿಜೆಪಿಗೆ ಸಡ್ಡು ಹೊಡೆದು ನಿಂತಂತೆ ಕಾಣಿಸುತ್ತಿದೆ ಆದ್ದರಿಂದ ಕಾಂಗ್ರೆಸ್ ಜೆಡಿಎಸ್ ಮುಂತಾದ ಜಾತ್ಯತೀತ ಪಕ್ಷಗಳು ಒಂದಾಗಿ ಮುಂಬರುವ ಚುನಾವಣೆ ಎದುರಿಸುವುದು ಸೂಕ್ತ

  • ಕೇಶವ ಸುವರ್ಣ  ಬೊಕ್ಕಪಟ್ನ ಮಂಗಳೂರು

LEAVE A REPLY