ದೇವಕಿ ಕೊಲೆ ಪ್ರಕರಣ ಸಂಬಂಧಿಕರಿಂದ ಹೇಳಿಕೆ ಪಡೆದ ಜಿಲ್ಲಾ ಪೊಲೀಸರು

ಕೊಲೆಯಾದ ದೇವಕಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆರಿಯಾಟಡ್ಕ ಮುನಿಕ್ಕಲ್ ಕೊಟ್ಟಿಯಡ್ಕ ನಿವಾಸಿ ಕೆ ದೇವಕಿ (68) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ಸಂಬಂಧಿಕರಿಂದ ಮಾಹಿತಿ ಕಲೆ ಹಾಕಿದರು.
ಇನ್ನೊಮ್ಮೆ ಹೇಳಿಕೆ ಪಡೆಯಲಿರುವುದಾಗಿ ಕಾಞಂಗಾಡ್ ಡಿವೈಎಸ್ಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೊಲೆಗೆ ಕಾರಣವೇನೆಂಬುದು ಈ ತನಕ ಪೊಲೀಸರಿಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದೆ. ಅದರಲ್ಲಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಉಲ್ಲೇಖಿಸಲಾಗಿದೆ. ಆದರೆ ದೇಹದಲ್ಲಿ ಯಾವುದೇ ಗಾಯಗಳಿರಲಿಲ್ಲ. ಇದೀಗ ಪರಿಸರವಾಸಿಗಳನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬವನ್ನು ಕೇಂದ್ರೀಕರಿಸಿ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. 10 ಸೆಂಟ್ಸ್ ಭೂಮಿ ಮಾತ್ರ ದೇವಕಿಯ ಹೆಸರಲ್ಲಿತ್ತು. ಭೂಮಿಗೆ ಸಂಭಂಧಿಸಿ ಏನಾದರೂ ತರ್ಕಗಳು ಇದೆಯಾ ಎಂಬ ಬಗ್ಗೆ ಕೂಡಾ ತನಿಖೆ ನಡೆಯುತ್ತಿದೆ.