ಚಿಕಿತ್ಸೆ ಫಲಿಸದೆ ಅಸ್ವಸ್ಥ ಮೃತ

ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಶಿರವಾಡದ ರೈಲ್ವೇ ನಿಲ್ದಾಣದ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯೊಬ್ಬ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸುರೇಶ ಪ್ರಭು ಶೆಟ್ಟಿ ಎಂಬವರು ಮೃತಪಟ್ಟವರು. ಕೆಲವು ದಿನಗಳ ಹಿಂದೆ ರೈಲ್ವೇ ನಿಲ್ದಾಣದ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಈತನಿಗೆ ಆರೋಗ್ಯ ಕವಚದ (108) ಮೂಲಕ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಆದರೆ ಈತನ ವಿಳಾಸದ ಬಗ್ಗೆ ಮಾಹಿತಿ ಇಲ್ಲ. ಈತನಿಗೆ ಸಂಬಂಧಿಸಿರುವವರು ಅಥವಾ ಈತನ ಬಗ್ಗೆ ಮಾಹಿತಿ ಇದ್ದವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಎಸೈ ವಿನಂತಿಸಿದ್ದಾರೆ.