ಆಸ್ತಿ ಮಕ್ಕಳಿದ್ದರೂ ತಾಯಿ ಅನಾಥೆ

ಆಸ್ಪತ್ರೆಯಲ್ಲಿ ಮಲಗಿರುವ ವೃದ್ಧೆ

ನಮ್ಮ ಪ್ರತಿನಿಧಿ ವರದಿ
ಸುಳ್ಯ : ಮಕ್ಕಳು  ಕುಟುಂಬ ಮತ್ತು ಆಸ್ತಿ ಹೊಂದಿದ್ದರೂ ಗೊತ್ತು  ಗುರಿಯಿಲ್ಲದೆ ಬೀದಿಯಲ್ಲಿ ಅಲೆದಾಡುತ್ತಿದ್ದ ವೃದ್ಧ ತಾಯಿಯನ್ನು ಸಾರ್ವಜನಿಕರು ಸುಳ್ಯದ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ
ಸುಮಾರು 90 ವರ್ಷ ಪ್ರಾಯ ದಾಟಿರಬಹುದಾದ ಈ ವೃದ್ಧೆ ಬಳಿ ಪಾಸ್ಪೋರ್ಟ್ ಇದೆ  ಅದರ ವಿಳಾಸ ಸರಿಯಾಗಿ ಗೋಚರಿಸುತ್ತಿಲ್ಲ. ಸುಳ್ಯ ತಾಲೂಕಿನ ಮುಕ್ಕೂರು ನಿವಾಸಿ ಎಂದು ಗೋಚರಿಸುತ್ತಿದ್ದು, ಉಳಿದ ವಿಳಾಸಗಳು ಅಸ್ಪಷ್ಟವಾಗಿದೆ
ಇದೇ ವೃದ್ಧೆ ಕೆಲವು ತಿಂಗಳ ಹಿಂದೆ ಮಡಿಕೇರಿ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ  ಇವರಿಗೆ ತಮ್ಮ ವಿಳಾಸವೇ ಮರೆತು ಹೋಗಿದ್ದು  ಸುಮಾರು 10 ವರ್ಷಗಳ ಹಿಂದೆ ಇವರನ್ನು ಮಕ್ಕಳು ಮನೆಯಿಂದ ಹೊರದಬ್ಬಿದ್ದಾಗಿ ವೃದ್ಧೆ ಕೆಲವರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ
ಮುಕ್ಕೂರಿನಲ್ಲಿ ಲಕ್ಷಾಂತರ ರೂ ಮೌಲ್ಯದ ಆಸ್ತಿ ಇತ್ತು ಮತ್ತು ನಾಲ್ಕು ಮಂದಿ ಗಂಡು ಮಕ್ಕಳಿದ್ದರು. 2012ರಲ್ಲಿ ಇವರು ಹಜ್ ಯಾತ್ರೆ ಕೈಗೊಂಡಿದ್ದರು  ವೃದ್ಧೆಯ ಪತಿ ನಿಧನವಾದ ಬಳಿಕ ಆಸ್ತಿಯಲ್ಲಿ ತಕರಾರು ಉಂಟಾದಾಗ ಮಕ್ಕಳು ಗಲಾಟೆ ಮಾಡಿ ತಾಯಿಯನ್ನು ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ  ಬಳಿಕ ತಾಯಿಯನ್ನು ಮಡಕೇರಿಗೆ ಬಿಟ್ಟು ಬಂದ ಮಕ್ಕಳು ಆಸ್ತಿಯನ್ನು ಮಾರಾಟಮಾಡಿ ಎಲ್ಲೋ ತೆರಳಿದ್ದಾರೆ ಎನ್ನಲಾಗಿದೆ
ವೃದ್ಧೆ ಕಳೆದ ಮೂರು ತಿಂಗಳ ಹಿಂದೆ 2 ತಿಂಗಳುಗಳ ಕಾಲ ಸುಳ್ಯದ ಕುರುಂಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಳಿಕ ಚೇತರಿಸಿಕೊಂಡು ಸುಳ್ಯದಲ್ಲಿ ತಿರುಗಾಡುತ್ತಿದ್ದರು  ಶನಿವಾರ ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಿತ್ರಾಣವಾಗಿ ರಸ್ತೆ ಬದಿ ಬಿದ್ದುಕೊಂಡಿದ್ದ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ  ವೃದ್ಧೆ ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿದ್ದು ತನಗೆ ಮಕ್ಕಳಿದ್ದಾರೆ ಎಂದು ಹೇಳುತ್ತಿದ್ದು ಆದರೆ ಮಕ್ಕಳು ಎಲ್ಲಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ  ನಾನು ಸಾಯುತ್ತಿದ್ದೇನೆ ನನಗೆ ನನ್ನ ಮಕ್ಕಳನ್ನು ಕಾಣಬೇಕು ಎಂದು ವೃದ್ಧೆ ಹೇಳುತ್ತಿರುವುದಾಗಿ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ಮಾಹಿತಿ ನೀಡಿದ್ದಾರೆ
ವೃದ್ದೆಯ ವಿಳಾಸವನ್ನು ತಿಳಿದು ಯುವಕರ ತಂಡವೊಂದು ಬೆಳ್ಳಾರೆ ಸಮೀಪದ ಮುಕ್ಕೂರಿಗೆ ತೆರಳಿ ವಿಚಾರಣೆ ನಡೆಸಿದ್ದು  ಅಲ್ಲಿ ಈವಿಳಾಸದ ಮಹಿಳೆಯ ಪರಿಚಯ ಯಾರಿಗೂ ಇಲ್ಲವಾಗಿದೆ  ಪಾಸ್ಪೋರ್ಟ್ ಅಕ್ಷರ ಮಾಸಿಹೋದ ಕಾರಣ ಸುಳ್ಯ ತಾಲೂಕಿನ ಮುಕ್ಕೂರು ಅಥವಾ ಪುತ್ತೂರು ತಾಲೂಕಿನ ಮುಂಡೂರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ  ಇವರ ಮಕ್ಕಳು ಇದ್ದಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಬಂದು ತಾಯಿಯನ್ನು ಭೇಟಿಯಾಗುವಂತೆಯೂ  ತಾಯಿಗೆ ಮಕ್ಕಳನ್ನು ನೋಡಬೇಕೆಂಬ ಕೊನೆಯ ಆಸೆಯನ್ನು ಈಡೇರಿಸುವಂತೆ ಸ್ಥಳೀಯ ಯುವಕರು ಮನವಿ ಮಾಡಿದ್ದಾರೆ