ಕೂಳೂರು ಫ್ಲೈಓವರ್ ಚರಂಡಿ ಹೂಳು ತೆಗೆಸಿ

ಮಂಗಳೂರು ಕಡೆ ಹೋಗುವ ಕೂಳೂರು ಫ್ಲೈಓವರ್ ಇಳಿಜಾರಿನಿಂದ ಮಳೆ ನೀರು ಸಂಗ್ರಹಗೊಂಡು ಜನ ಬಸ್ ಹತ್ತಿ ಇಳಿಯುವಲ್ಲಿ ಈಜುಕೊಳದಂತಾಗಿ ಪ್ರಯಾಣಿಕರಿಗೆ  ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಈ ನೀರಿನಲ್ಲಿ ನಿಂತು ಬಸ್ ಕಾಯಬೇಕಿದೆ. ಸಮೀಪದಲ್ಲಿಯೇ ಚರಂಡಿ ಇದ್ದು ಅದಕ್ಕೆ ಬಿಡಿಸಿ ಕೊಟ್ಟರೂ ಚರಂಡಿಯಲ್ಲಿ ಹೂಳು ತುಂಬಿ ಹೋಗಿದ್ದರಿಂದ ನೀರು ರಸ್ತೆಯಲ್ಲಿ ಶೇಖರಣೆ ಆಗಿ ರಸ್ತೆ ಪೂರಾ ಹೊಂಡ ಬಿದ್ದಿದೆ  ಪ್ರತಿ ಮಳೆಗಾಲದಲ್ಲಿ ಇಲ್ಲಿ ಸಮಸ್ಯೆಯೇ, ಇದಕ್ಕೆ ಇಷ್ಟರವರೆಗೂ ಶಾಶ್ವತ ಪರಿಹಾರವೇ ಹುಡುಕುತ್ತಿಲ್ಲ. ಇನ್ನು ಜೋರಾದ ಮಳೆ ಬಂದರೆ ನದಿಯಂತಾಗುತ್ತದೆ ರಸ್ತೆ. ಕೂಡಲೇ ಸಂಬಂಧಪಟ್ಟವರು ಮಳೆ ನೀರು ಹರಿದು ಹೋಗುವ ಚರಂಡಿ ಹೂಳೆತ್ತಿ ನೀರು ಸರಾಗ ಹರಿದು ಹೋಗುವಂತೆ ಮಾಡಿ

  • ಅಕ್ಷಯ್ ಸುವರ್ಣ  ಕೂಳೂರು