ಕಾರವಾರದಲ್ಲಿ ಬಾಲ ಬಿಚ್ಚಲಾರಂಭಿಸಿದ ದೇಶಪಾಂಡೆ ಚೇಲಾಗಳು

ಸಚಿವ ಆರ್.ವಿ ದೇಶಪಾಂಡೆ

ಬಾಲ ಮುದುರಿಕೊಂಡು ಕುಳಿತ ಸರಕಾರಿ ಅಧಿಕಾರಿಗಳು
………………

ಕಳೆದ ಕೆಲವು ತಿಂಗಳುಗಳಿಂದ ಕಾರವಾರದಲ್ಲಿ ಬಾಲಮುದುರಿ ತೆಪ್ಪಗೆ ಕುಳಿತಿದ್ದ ಸಚಿವ ದೇಶಪಾಂಡೆಯವರ ಶಿಷ್ಯರು ಮತ್ತೆ ಬಾಲ ಬಿಚ್ಚಲು ಆರಂಭಿಸಿದ್ದಾರೆ  ಅಚ್ಚರಿಯ ವಿಷಯವೆಂದರೆ ಈ ಜನ ಬಾಲ ಬಿಚ್ಚಿದರೆ ಕಾರವಾರದ  ದಕ್ಷ  ಅಧಿಕಾರಿಗಳೆಲ್ಲ ಬಾಲ ಮುದುರಿ ಕುಳಿತುಕೊಳ್ಳುತ್ತಾರೆ  ಇತ್ತಿಚೆಗೆ ನಡೆದ ಮೂರು ಘಟನೆಗಳ ಹಿನ್ನಲೆಯನ್ನು ಗಮನಿಸಿದರೆ ಕಾರವಾರದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆ ಕ್ರಮೇಣ ಹದಗೆಡುತ್ತಿದೆ ಎಂಬ ಭಾವನೆ ಬರುತ್ತಿದೆ
ಕೆಲಕಾಲ ತಣ್ಣಗಾಗಿದ್ದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಬೇಡಿಕೆ ಮತ್ತೆ ಕಾರವಾರದಲ್ಲಿ ತಲೆ ಎತ್ತಿದೆ  ಆರಂಭದಲ್ಲಿ ಈ ಹೆದ್ದಾರಿ ಅಗಲೀಕರಣದ ವೇಳೆ ಸಚಿವ ದೇಶಪಾಂಡೆ ಅವರು ಬೀಚ್ ಉಳಿಸಲು ಫ್ಲೈಓವರ್ ನಿರ್ಮಿಸುವುದಾಗಿ ಮೊಣಕೈಗೆ ತುಪ್ಪ ಸವರಿದ್ದರು  ಆದರೆ ಈಗ ಹೆದ್ದಾರಿ ಅಗಲೀಕರಣ ಭರದಿಂದ ಸಾಗುತ್ತಿದ್ದಂತೆ ಫ್ಲೈಓವರ್ ಇಲ್ಲ ಎಂಬ ಸುದ್ದಿ ಬಂದಿದೆ  ಹೀಗಾಗಿ ಕಾರವಾರದ ಜಾಗೃತ ನಾಗರಿಕರು ಫ್ಲೈಓವರಿಗಾಗಿ ಬೇಡಿಕೆ ಇಟ್ಟಿದ್ದಾರಲ್ಲದೇ ಬೀಚ್ ರಕ್ಷಣೆಗೆ ಒತ್ತಾಯಿಸಿದ್ದಾರೆ  ಆದರೆ ಊರಿಗೆ ಒಂದಾದರೆ ಪೋರನಿಗೇ ಮತ್ತೊಂದು ಎಂಬಂತೆ ಕೆಲವರು ಈಗ  ಫ್ಲೈಓವರ್ ಸಹ ಬೇಡ  ಬೈಪಾಸ್ ಬೇಕು  ಇದರಿಂದ ಬೀಚ್ ಉಳಿಯಬೇಕು  ಎಂದು ತಮ್ಮ ಹಳೆಯ ತುತ್ತೂರಿ ಊದಲು ಆರಂಭಿಸಿದ್ದಾರೆ ಬೀಚ್ ಉಳಿಸಲು ಬೈಪಾಸ್ ಬೇಕು ಎಂಬ ಬೊಂಬಡಾ ಬಜಾಯಿಸಲಾಗುತ್ತದೆಯಾದರೂ ಇದು ಓರ್ವ ಗುತ್ತಿಗೆದಾರನ ಕಲ್ಲು ಕ್ವಾರಿ ಉಳಿಸುವ ಹೋರಾಟ ಎಂಬುದು ತಿಳಿಯಬೇಕು  ಇಲ್ಲಿನ ಜನ ದಡ್ಡರಲ್ಲ  ಭಾರಿ ವಕೀಲರನ್ನೇ ಹೈಕೋರ್ಟಿನಲ್ಲಿ ದಿಲ್ಲಿಯಿಂದ ತಂದು ನಿಲ್ಲಿಸಿದಾಗಲೇ ಗೆಲ್ಲಲಾಗದ ಈ ಕೇಸ್ ಪ್ರಧಾನಿಗೆ ಈಮೇಲ್ ಕಳುಹಿಸಿ ಗೆಲ್ಲಲು ಸಾಧ್ಯವೇ   ಅದೇನೇ ಇರಲಿ  ನಾಟಕವಂತೂ ಭಾರಿ ಜೋರಾಗಿ ನಡೆಯುತ್ತಿದೆ. ದೇಶಪಾಂಡೆಯ ಸುತ್ತಮುತ್ತ ಉಪಗೃಹದಂತೆ ಸುತ್ತುವ ಜನರೇ ಈ ನಾಟಕದ ಪಾತ್ರಧಾರಿಗಳು ಎಂಬುದು ಇಲ್ಲಿ ಮುಖ್ಯ ಅಂಶ
ಇದೇ ಪಾತ್ರಧಾರಿಗಳು ಇತ್ತೀಚೆಗೆ ತಮ್ಮ ನಾಟಕ ಕಂಪನಿಯ ಟೆಂಟನ್ನು ಬಸ್ ಡಿಪೋ ಎದುರಿಗೆ ಸ್ಥಳಾಂತರಿಸಿದ್ದರು. ಕೈಗಾಕ್ಕೆ ಬಸ್ ಬಿಡಬೇಕು ಎಂದು ಒತ್ತಾಯಿಸಿ 8-10 ಜನ ಬಸ್ ಡಿಪೋದ ಎದುರು ರಸ್ತೆ ತಡೆ ನಡೆಸಿದ್ದರು. ಎರಡೂ ಕಡೆ ಮೈಲುಗಟ್ಟಲೇ ಉದ್ದದ ವಾಹನ ಸಾಲು ನಿಂತು ಹುಯ್ಯೋ ಎಂದು ಹಾರ್ನ ಹೊಡೆದು ಕೇಳುವವರ ಕಿವಿಯ ಪಟಲ ಒಡೆದು ಹೋಗುವಂತೆ ಸದ್ದು ಮಾಡಿದರೂ ಕಾರವಾರದ ಪೊಲೀಸರು ಕಿವಿ ಕೇಳದ ಕೆಪ್ಪರಂತೆ ನಟಿಸುತ್ತಾ ಹ್ಯಾಪು ಮೋರೆ ಹಾಕಿ ನಿಂತಿದ್ದರು  ಸಿಪಿಐ ಶರಣಗೌಡರ ತಂಡ ಈ ಮರಿ ಪುಢಾರಿಗಳ ಎದುರು ಸಂಪೂರ್ಣ ಶರಣಾಗಿ ನಿಂತಿತ್ತು  ಸುಮಾರು ಒಂದು ಗಂಟೆ ಜನ ಪರದಾಡಿದರೂ ಅನುಮತಿ ಇಲ್ಲದೇ ರಾಸ್ತಾ ತಡೆ ನಡೆಸಿದರೆ ನಮ್ಮ ದಕ್ಷ ಅಧಿಕಾರಿಗಳಿಗೆ ಅವರನ್ನು ಎಳೆದು ಪಕ್ಕಕ್ಕೆ ಹಾಕುವ ಧೈರ್ಯವೂ ಇರಲಿಲ್ಲ. ಲಾಲು ಕಾಲದಲ್ಲಿ ಬಿಹಾರದಲ್ಲಿ  ಜಂಗಲ್ ರಾಜ್  ನಡೆಯುತ್ತಿದ್ದ ಕಥೆ ಕೇಳಿದ ಜನರೆಲ್ಲ ಪ್ರಾತ್ಯಕ್ಷಿಕೆ ನೋಡಲು ಕಾರವಾರಕ್ಕೆ ಬರಲಿ  ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದಾಗಿ ತುತ್ತೂರಿ ಬಾರಿಸುವ ಸಚಿವ ದೇಶಪಾಂಡೆ  ಜಂಗಲ್ ರಾಜ್ ದರ್ಶನ’ ಎಂಬ ಕಾನೂನು ಭಂಜನೆಯ ತೋರಿಸುವ ಹೊಸ ಕಾನ್ಸೆಪ್ಟ್ ಜಾರಿಗೆ ತಂದು ಅದನ್ನು ಪ್ರಚಾರ ಮಾಡಿದರೆ  ಮಿನಿ ಲಾಲು ರಾಜ್ ನೋಡಲು ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಕಾರವಾರಕ್ಕೆ ಬರಬಹುದು ಎನ್ನುವುದು ನನ್ನ ನಂಬಿಕೆ
ಮೂರನೇಯ ಘಟನೆಯಲ್ಲಿ ದೇಶಪಾಂಡೆಯ ಇನ್ನೊಬ್ಬ ಶಿಷ್ಯ ಮಾಜಿ ನಗರಸಭೆ ಅಧ್ಯಕ್ಷ ಮಾರುತಿ ಸ್ವಾರ್ ಅಳಿಯ ರಾಜನ್ ಮಾಪ್ಸೇಕರ್ ಎಂಬಾತ ಈ ಅಧಿಕಾರಿಗಳ ಬುಡಕ್ಕೆ ಕೈಹಾಕುವ ಧೈರ್ಯ ತೋರಿಸಿದ್ದಾನೆ. ಕಂದಾಯ ಇಲಾಖೆಯ ಅಧಿಕಾರಿಗಳ ಪ್ರಕಾರ ಈತ ದೇವಾಲಯದ ಜಮೀನನ್ನು ಖರೀದಿಸಿ ಅಲ್ಲಿ ಗುಡ್ಡದ ತುದಿಯಲ್ಲಿ ಒಂದು ಬಹು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದಾನೆ  ಅದಕ್ಕಾಗಿ ರಾಜಕಾಲುವೆ ಒಡೆದು ಹಾಕಿ, ಅಲ್ಲಿನ ಪರಿಸರದ ಗಿಡಮರಗಳನ್ನು ಅಕ್ರಮವಾಗಿ ಕತ್ತರಿಸಿ ಹಾಕಿದ ಆರೋಪ ಈತನ ಮೇಲಿದೆ  ಆದರೆ ಈತ ದೇಶಪಾಂಡೆಯ ಶಿಷ್ಯನ ಅಳಿಯನಾಗಿದ್ದರಿಂದ ಈತನ ಎದುರು ಅರಣ್ಯ  ಕಂದಾಯ  ಪೊಲೀಸ್  ನಗರಸಭೆ ಹೀಗೆ ಎಲ್ಲ ಇಲಾಖೆಯ ಅಧಿಕಾರಿಗಳು ತೊಡೆಯ ಸಂದಿಯಲ್ಲಿ ಬಾಲ ಇಟ್ಟುಕೊಂಡು ನಿಂತಿರುತ್ತಾರೆ  ಈ ಪ್ರಕರಣ ಅತಿರೇಕಕ್ಕೆ ಹೋದಾಗ ನಗರಸಭೆಯಲ್ಲಿ  ಮೋಹನ ರಾಗ  ಹಾಡುವ ಎಂಜಿನೀಯರನೊಬ್ಬ ದೇಶಪಾಂಡೆ ಶಿಷ್ಯನ ಎದುರು ರೋಪ್ ಹಾಕಲು ಹೋಗಿ ಆತನಿಂದ ಚೆನ್ನಾಗಿ ಉಗಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ
ಅರಣ್ಯ ಇಲಾಖೆಯ ಆರ್ ಎಫ್ ಓ ಒಬ್ಬ ಬಂದು ಬಿಲ್ಡರನ ಎದುರು ಕಾಡಿನ ಮುದಿಸಿಂಹದಂತೆ ನಿಂತಲ್ಲೇ ಗರ್ಜಿಸಿ ಮರಕಡಿದರೂ ಏನೂ ಮಾಡಲಾಗದೇ ಓಡಿದ್ದಾನೆ  ಥೇಟ್ ಗೋವಿನಂತಿರುವ ತಪಶೀಲುದಾರನೊಬ್ಬ ಎಲ್ಲ ಪರಿಕರಗಳನ್ನು ಸೀಜ್ ಮಾಡಿ ಎಂದು ತಮ್ಮ ಸಿಬ್ಬಂದಿಗೆ ಆದೇಶಿಸಿ ತಾನು ಜಾಗ ಖಾಲಿ ಮಾಡಿದ್ದಾನೆ  ಪೊಲೀಸರಂತೂ ಯಥಾ ಪ್ರಕಾರ ಹ್ಯಾಪಮೋರೆ ಹಾಕಿ ಕೌರವರಿಗೂ ಭಾವ  ಪಾಂಡವರಿಗೂ ಭಾವ ಎಂಬಂತೆ ವರ್ತಿಸಿ ಜಾಗ ಖಾಲಿ ಮಾಡಿದ್ದಾರೆ  ದೇಶಪಾಂಡೆ ಶಿಷ್ಯರಿಗೆ ಸಿಕ್ಕ ಅನುಕೂಲ ನಮ್ಮಂಥವರಿಗೆ ಸಿಗುವುದು ಕನಸಿನ ಮಾತು  ಕಳೆದ ಒಂದು ವಾರದಲ್ಲಿ ನಡೆದ ಈ ಘಟನೆಗಳು ಕಾರವಾರದಲ್ಲಿ ದೇಶಪಾಂಡೆ ಶಿಷ್ಯರ ಹಾರಾಟ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ

ಊರು ಸುಟ್ಟರೂ ಹನುಮಪ್ಪ ಹೊರಗೆ ಎಂಬ ಗಾದೆ ಮಾತಿನಂತೆ ಇದ್ಯಾವುದು ತನಗೆ ಸಂಬಂಧವೇ ಇಲ್ಲದಂತೆ ಸಚಿವ ದೇಶಪಾಂಡೆ ಬೆಂಗಳೂರಿನಲ್ಲಿದ್ದಾರೆ  ಮತ್ತೆ ಜಂಗಲರಾಜ್ ಮರುಕಳಿಸುತ್ತಿದೆ  ತಮಿಳುನಾಡಿನ ಮನ್ನಾರಗುಡಿ ಮಾಫಿಯಾದ ರೀತಿಯಲ್ಲಿ ಈ  ಲಟ್ಟಂಪುರಿ ಮಾಫಿಯಾಗಳು ತಲೆ ಎತ್ತುತಿದೆ  ಇದು ಮುಂದುವರಿದರೆ ಇವರ ಗುರು ದೇಶಪಾಂಡೆಗೆ ಜನ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವುದು ಖಂಡಿತ

  • ಜಿ ಎಚ್ ನಾಯ್ಕ
    ನಿವೃತ್ತ ಪೊಲೀಸ್ ಅಧಿಕಾರಿ