ಹೆಸರಿಗಷ್ಟೇ ನಾವು ಸಾಧ್ವಿ , ನಿಜವಾಗಿ ವೇಶ್ಯೆಯರು !

ರಾಮ್ ರಹೀಮನ ಕಾಮಾವತಾರಗಳು ಬೆಳಕಿಗೆ ಬಂದಿದ್ದು 2003ರಲ್ಲಿ ಡೇರಾ ಸಚ್ಚಾ ಸೌದಾದ ಕೆಲ ಸಾಧ್ವಿಯರು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಬರೆದ ಪತ್ರದ ಮೂಲಕ.

“ನಾವು ಲೋಕದ ಕಣ್ಣಿಗೆ ಸಾಧ್ವಿಯರು, ಆದರೆ ಡೇರಾ ಸಚ್ಚಾ ಸೌದಾದಲ್ಲಿ ವೇಶ್ಯೆರಂತೆ ಬದುಕುತ್ತಿದ್ದೇವೆ. ರಾಮ್ ರಹೀಮ್ ನಮ್ಮ ಮೇಲೆ ಅತ್ಯಾಚಾರ ನಡೆಸುತ್ತಾನೆ. ನಮ್ಮಂತೆ ನೂರಾರು ಹುಡುಗಿಯರು ಆತನಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ. ಇದರ ಬಗ್ಗೆ ಬಾಯ್ಬಿಟ್ಟವರನ್ನು ಕೊಲ್ಲಿಸಿದ್ದಾರೆ. ನಮ್ಮ ಮನೆಯವರು ವಿರೋಧಿಸಿದರೆ ಅವರನ್ನೂ ಕೊಲ್ಲಿಸುತ್ತಾರೆ. ನಮ್ಮನ್ನು ರಕ್ಷಿಸಿ” ಎಂದು ಪತ್ರದಲ್ಲಿ ಸಾಧ್ವಿಯರು ಗೋಳು ತೋಡಿಕೊಂಡಿದರು. ನಂತರ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಲಾಗಿತ್ತು.

ರಾಮ್ ರಹೀಮನ ಆಶ್ರಮದ ವತಿಯಿಂದ ನಡೆಸುವ ಸಮಾಜ ಕಲ್ಯಾಣ ಕೆಲಸಗಳಲ್ಲಿ ವೇಶ್ಯೆಯರಿಗೆ ಪುನರ್ವಸತಿ ಕಲ್ಪಿಸುವುದು ಒಂದಾಗಿತ್ತು. ವೇಶ್ಯೆಯರಿಗೆಲ್ಲಾ ತಾನು ತಂದೆ ಎಂದು ಹೇಳಿಕೊಂಡು ಅವರಿಗೆ ಆಶ್ರಮದ ಕೆಲಸಗಾರರ ಜೊತೆ ಈತ ಮದುವೆ ಮಾಡಿಸುತ್ತಿದ್ದ. ಅವರಲ್ಲಿ ಚೆನ್ನಾಗಿರುವ ಯುವತಿಯರನ್ನು ಹಾಗೂ ಕೆಲ ಸಾಧ್ವಿಯರನ್ನು ತನ್ನ ಖಾಸಗಿ ವೇಶ್ಯೆಯರನ್ನಾಗಿ ಮಾಡಿಕೊಂಡಿದ್ದ.

ತನ್ನ ಜೊತೆ ಮಲಗುವುದರಿಂದ ವೇಶ್ಯೆಯರು ಈ ಹಿಂದೆ ಮಾಡಿದ ತಪ್ಪಿಗೆ ಮಾಫಿ ಸಿಗುತ್ತದೆ ಎಂಬಂತೆ ಬ್ರೇನ್ ವಾಶ್ ಮಾಡಿ, ತಾನೇ ದೇವರು ಎಂದು ಹೇಳುತ್ತಾ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಅದಕ್ಕೆ ಒಪ್ಪದವರನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದ. “ಮಹಾರಾಜರ ಮುಂದಿನ ಮಾಫಿ ಭಾಗ್ಯ ಯಾರಿಗೆ ಸಿಗುತ್ತದೆಯೋ” ಎಂದು ಡೇರಾದೊಳಗೆ ಸಾಧ್ವಿಯರು ಜೋಕ್ ಮಾಡಿಕೊಳ್ಳುತ್ತಿದ್ದರಂತೆ !