ಕೇರಳದಲ್ಲಿ ಜ್ವರಬಾಧೆಯಿಂದ 100ಕ್ಕೂ ಅಧಿಕ ಜನ ಮೃತ

ತಿರುವನಂತಪುರಂ : ನೈರ್ಮಲ್ಯ ಕೊರತೆಯಿಂದ ಕೇರಳದಲ್ಲಿ ಜನವರಿಯಿಂದ ಇದುವರೆಗೆ ವಿವಿಧ ರೀತಿಯ ಜ್ವರ ಬಾಧೆಯಿಂದ 100ಕ್ಕೂ ಅಧಿಕ ಮಂಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡುವ ಸರ್ಕಾರಿ ಕಾರ್ಯಕ್ರಮಗಳೊಂದಿಗೆ ಕೈಜೋಡಿಸುವಂತೆ ಸರ್ಕಾರ ಜನತೆಯಲ್ಲಿ ನಿನ್ನೆ ಮನವಿ ಮಾಡಿದೆ. ಇಲ್ಲಿ ವ್ಯಾಪಕವಾಗಿ ಹಡರಡಿರುವ ಎಚ್1ಎನ್1, ಲೆಪ್ಟೋಸ್ಪರೋಸಿಸ್ ಮತ್ತು ಡೆಂಗ್ಯೂವಿನಂತಹ ಹಲವು ವಿಧದ ಜ್ವರಬಾಧೆಯಿಂದ ಮಹಿಳೆಯರು ಮತ್ತು ಮಕ್ಕಳ ಸಹಿತ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿರುವನಂತಪುರಂನ ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.