ಬಿಜೆಪಿಗನ ವಾಹನದಿಂದ 10.5 ಲಕ್ಷರೂ ಹಳೆ ನೋಟು ವಶ

ಪುಣೆ : ಇಲ್ಲಿನ ಸಸ್ವಾಡಿಗೆ ಹತ್ತಿರದ ನಿವಾಸಿ, ಬಿಜೆಪಿ ಕಾರ್ಪೊರೇಟರ್ ಒಬ್ಬರಿಂದ 1,000 ಮತ್ತು 500 ರೂವಿನ 10.5 ಲಕ್ಷ ಹಳೆಯ ಕರೆನ್ಸಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪುಣೆ ನಗರ ಪಾಲಿಕೆಯ ಮಾಜಿ  ಕಾರ್ಪೊರೇಟರ್ ಉಜ್ವಲ್ ಕೇಸ್ಕರ್ ಎಂಬವರ ಮನೆಯಿಂದ ಇಷ್ಟೊಂದು ಹಳೆ ಕರೆನ್ಸಿ ಮುಟ್ಟುಗೋಲು ಹಾಕಲಾಗಿದೆ. ಇವರು ಶುಕ್ರವಾರದಂದು ತನ್ನ ಮೂವರು ಸಹವರ್ತಿಗಳೊಂದಿಗೆ ಭಾರಾಮತಿಯತ್ತ ವಾಹನದಲ್ಲಿ ಸಾಗುತ್ತಿದ್ದಾಗ, ಇಷ್ಟೊಂದು ಮೊತ್ತದ ಅಪಮೌಲ್ಯೀಕರಣಗೊಂಡ ರೂಪಾಯಿ ಕಂತೆ ಪತ್ತೆಯಾಗಿತ್ತು.

“ರಾಜ್ಯ ಚುನಾವಣಾ ಆಯುಕ್ತ ಮತ್ತು ಪೊಲೀಸರ ತಂಡವೊಂದು ಮಾಜಿ ಕಾರ್ಪೊರೇಟರಿಗೆ ಸೇರಿದ 10.5 ಲಕ್ಷ ಹಳೆ ನೋಟು ಜಪ್ತಿ ಮಾಡಿದೆ. ಇದೆಲ್ಲವೂ ಕೇಸ್ಕರಿಗೆ ಸೇರಿದ ನಗದಾಗಿತ್ತು. ಆದಾಯ ತೆರಿಗೆ ಇಲಾಖೆಗೆ ಈ ವಿಷಯ ತಿಳಿಸಲಾಗಿದೆ” ಎಂದು ಸಸ್ವಾಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.