ಶೋ…ಇಷ್ಟೇನಾ

`ಅಂಚೆನೇ ಆವೋಡು…..ಬಾಲೆಲೆಗ್’

ನವೆಂಬರ್ 8ಕ್ಕೆ ರಾತ್ರಿ 8 ಗಂಟೆಗೆ ಇದ್ದಕ್ಕಿದ್ದಂತೆ 500, ಒಂದು ಸಾವಿರ ರೂಪಾಯಿ ನೋಟನ್ನು ಅಮಾನ್ಯೀಕರಣ ಮಾಡುವಾಗ   ಭೇಷ್   ಎಂದು ದೇಶದಲ್ಲಿ ಸಾಮಾನ್ಯವಾಗಿ ಸರ್ವತ್ರ ಜನರೂ ಖುಷಿ ಪಟ್ಟಿದ್ದು   ಅಂಚೆನೇ ಆವೋಡು ಬಾಲೆಲೆಗ್ ಎಂದು ಎಲ್ಲಾ ಲಂಚಕೋರರ ಬಗ್ಗೆ ಕಾಳ ಧನಿಕರ ಬಗ್ಗೆ ಮನದಲ್ಲೇ ಶಾಪ ಹಾಕಿ ಖುಷಿ ಪಟ್ಟಿದ್ದರು  ಆದರೆ ಈಗ ಇದ್ದಕ್ಕಿದ್ದಂತೆ ರಾಜಕೀಯ ಪಕ್ಷಗಳು ಪಡಕೊಳ್ಳುವ 500  1000ದ ಹಳೆ ನೋಟುಗಳ ಬಗ್ಗೆ ಯಾವುದೇ ತನಿಖೆ  ವಿಚಾರಣೆ ಇರುವುದಿಲ್ಲ ಎಂದು ದಿನಪತ್ರಿಕೆಗಳಲ್ಲಿ ಸುದ್ದಿ ಓದಿ  ನಾವೆಲ್ಲ ಇಷ್ಟು ಕಷ್ಟಪಟ್ಟು ದೇಶಪ್ರೇಮ ತೋರಿಸಿ ಇದಕ್ಕೆ ಬೆಂಬಲಿಸಿದ್ದು ಇಷ್ಟಕ್ಕೇನಾ ಅಂತ ಅನಿಸಿದ್ದು ಸುಳ್ಳಲ್ಲ

  • ಅಜಿತ್‍ಕುಮಾರ್ ರಾವ್  ಮಂಗಳೂರು