ನೋಟು ಅಮಾನ್ಯ ವರ್ಷದ ಅತಿ ದೊಡ್ಡ ಹಗರಣ : ಚಿದು

ನಾಗ್ಪುರ :  ನೋಟು ಅಮಾನ್ಯೀಕರಣ  ಈ ವರ್ಷದ ಅತಿ ದೊಡ್ಡ ಹಗರಣವಾಗಿ ರೂಪುಗೊಳ್ಳುತ್ತಿದೆಯೆಂದು  ದೇಶದಾದ್ಯಂತ ಅಕ್ರಮವಾಗಿ ಶೇಖರಿಸಲ್ಪಟ್ಟ ಭಾರೀ  ಮೊತ್ತದ ಹೊಸ 2000 ರೂಪಾಯಿ ನೋಟುಗಳ ಪತ್ತೆಯ ಹಿನ್ನೆಲೆಯಲ್ಲಿ ಮಾಜಿ ವಿತ್ತ ಸಚಿವ ಪಿ ಚಿದಂಬರಂ  ಹೇಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೊಸ ನೋಟುಗಳನ್ನು ಕೆಲವರು ಶೇಖರಿಸುತ್ತಿರುವುದನ್ನು ಪತ್ತೆ ಹಚ್ಚಿಲಾಗಿರುವ ಬಗ್ಗೆ ತನಿಖೆಯಾಗಬೇಕು ಎಂದು ಅವರು ಸುದ್ದಿಗಾರರೊಡನೆ ಮಾತನಾಡುತ್ತಾ ಹೇಳಿದರು. ನೋಟು ರದ್ದತಿ ಕ್ರಮ ಇಲ್ಲಿಯವರೆಗೆ ಭ್ರಷ್ಟಾಚಾರ, ಕಾಳಧನ ಸಂಗ್ರಹ ಯಾ ಉಗ್ರವಾದಿಗಳ ಆರ್ಥಿಕತೆಯನ್ನು ಬಾಧಿಸಿಲ್ಲ ಎಂದು ಅವರು ಹೇಳಿದರು.

“ಎರಡು ಸಾವಿರ ಮುಖಬೆಲೆಯ ನೋಟುಗಳನ್ನೂ ಹಿಂಪಡೆಯಬೇಕಾಗುವುದು ಎಂದು ಆರೆಸ್ಸೆಸ್ ನಾಯಕರೊಬ್ಬರು ಹೇಳಿದ್ದಾರೆ. ಸರಕಾರ ಹಾಗೆ ಮಾಡಿದರೂ ಆಶ್ಚರ್ಯವೇನಿಲ್ಲ” ಎಂದು ಚಿದಂಬರಂ ಹೇಳಿದರು.