ಧರ್ಮಸ್ಥಳ ದಲಿತ ಬಾಲಕಿ ಸಾಮೂಹಿಕ ಅತ್ಯಾಚಾರ

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಮಂಗಳೂರು : ಇತ್ತೀಚೆಗಷ್ಟೇ ಬೆಳಕಿಗೆ ಬಂದಿದ್ದ ಧರ್ಮಸ್ಥಳ ಮೂಲದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಮೇಲಿನ ನಿರಂತರ ಸಾಮೂಹಿಕ ಅತ್ಯಾಚಾರದ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಒತ್ತಾಯಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತ ನಾಡಿದ ಅವರು “ಬಾಲಕಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು

ಆಕೆಯನ್ನು ಕಳೆದ ಎಂಟು ತಿಂಗಳಿನಿಂದ ನಿರಂತರ ಅತ್ಯಾಚಾರ ನಡೆಸುತ್ತಾ ಬಂದಿದ್ದಾರೆ. ಅತ್ಯಾಚಾರ ನಡೆಸಿದವರಲ್ಲಿ ಪ್ರತಿಷ್ಠಿತ ವ್ಯಕ್ತಿಗಳೂ ಸೇರಿದ್ದಾರೆ” ಎಂದು ಆರೋಪಿಸಿದರು.

ಈ ಅತ್ಯಾಚಾರದ ಹಿಂದೆ ಸುಮಾರು 20 ಮಂದಿಗೂ ಅಧಿಕ ಆರೋಪಿಗಳ ಕೈವಾಡ ಇದೆ. ಆದರೆ ಪೊಲೀಸರು ಮಾತ್ರ ಇದೀಗ ಕೇವಲ ಐದಾರು ಮಂದಿಯನ್ನು ಮಾತ್ರ ಹೆಸರಿಸಿದ್ದಾರೆ. ಅಲ್ಲದೇ ಸ್ಥಳೀಯ ಪಂಚಾಯತ್ ನಿರ್ಗತಿಕ ಈ ಬಾಲಕಿಯ ನೆರವಿಗೆ ಬಾರದೇ ಅಪರಾಧವೆಸಗಿದೆ ಎಂದರು. ಈ ಎಲ್ಲಾ ವಿಚಾರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಲೋಲಾಕ್ಷ ಒತ್ತಾಯಿಸಿದ್ದಾರೆ.

ಈ ಆಘಾತಕಾರಿ ಘಟನೆ ಬೆಳಕಿಗೆ ಬಂದು ಧರ್ಮಸ್ಥಳ ಪೋಲಿಸ್ ಠsÁಣೆಯಲ್ಲಿ ಮೊಕದ್ದಮೆ ದಾಖಲಾಗಿ ಒಂದು ವಾರ ಕಳೆಯುತ್ತಾ ಬಂದರೂ, ಈ ವರೆಗೆ ನತದೃಷ್ಟ ದಲಿತ ಬಾಲಕಿಯನ್ನು ಭೇಟಿ ಮಾಡಿ ಆಕೆಗೆ ಧೈರ್ಯ ತುಂಬಲು ಸಮಿತಿಯ ಸದಸ್ಯರಿಗಾಗಲೀ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗಾಗಲೀ ಜಿಲ್ಲಾಧಿಕಾರಿಗಳಿಗಾಗಲೀ ಸಮಯವೇ ಸಿಗದಿದ್ದದ್ದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಲೋಲಾಕ್ಷ ದೂರಿದ್ದಾರೆ. ಈ ಸಂದರ್ಭ ರೆನ್ನಿ ಡಿ ಸೋಜ, ಶ್ರೀದರ್ ರಾವ್ ಉಪಸ್ಥಿತರಿದ್ದರು.