ಬಸ್ಸಿಗೆ ಕಲ್ಲೆಸೆತ : ಆರೋಪಿಗಳ ಬಂಧನಕ್ಕೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಸ್ಸಿಗೆ ಕಲ್ಲೆಸೆದು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಂಡರೆ ಗುರುತು ಹಚ್ಚಬಹುದಾದ ಹಲವು ಮಂದಿಯ ವಿರುದ್ಧ ಮಂಜೇಶ್ವರ ಪೆÇಲೀಸರು ಜಾಮೀನು ರಹಿತ ಕೇಸು ದಾಖಲಿಸಿದ್ದಾರೆ. ಮಂಗಳವಾರ ರಾತ್ರಿ 7.30ಕ್ಕೆ ಕಡಂಬಾರ್ ಶಾಲೆಯ ಬಳಿ ತಿರುವಿನಲ್ಲಿ ಪ್ರಜ್ವಲ್ ಬಸ್ಸಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಚಾಲಕ ಕರೋಪಾಡಿ ಮಿತ್ತನಡ್ಕ ನಿವಾಸಿ ಜನಾರ್ದನ ನೀಡಿದ ದೂರಿನಂತೆ ಪೆÇಲೀಸರು ಕೇಸು ದಾಖಲಿಸಿದ್ದು, ಕೆಲವರನ್ನು ಶಂಕೆ ಮೇರೆಗೆ ಕಸ್ಟಡಿಗೆ ಪಡೆದು ವಿಚಾರಿಸುತ್ತಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಕಲ್ಲೆಸೆತದಿಂದ ಬಸ್ ಗಾಜು ನಾಶವಾಗಿದ್ದು, 25 ಸಾವಿರ ರೂ ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ.

ಕಡಂಬಾರ್ ಹಾಗೂ ಸೋಂಕಾಲಿನಲ್ಲಿ ಬಸ್ಸುಗಳಿಗೆ ಕಲ್ಲೆಸೆದ ದುಷ್ಕರ್ಮಿಗಳನ್ನು ಸೆರೆ ಹಿಡಿಯದಿದ್ದರೆ ಇಂದಿನಿಂದ ಹೊಸಂಗಡಿ-ಆನೆಕಲ್ಲು, ಉಪ್ಪಳ-ಬಾಯಾರ್ ರೂಟಿನಲ್ಲಿ ಬಸ್ ಸಂಚಾರ ಮೊಟಕುಗೊಳಿಸಲಾಗುವುದೆಂಬ ಮಂಜೇಶ್ವರ ಬಸ್ ಮಾಲಕರ ಸಂಘದ ತೀರ್ಮಾನವನ್ನು ಮಂಜೇಶ್ವರ ಪೆÇಲೀಸರು ನೀಡಿದ ಭರವಸೆ ಆಧಾರದಲ್ಲಿ ಹಿಂತೆಗೆಯಲಾಗಿದೆ. ಎರಡು ದಿನದಲ್ಲಿ ಅಪರಾಧಿಗಳನ್ನು ಸೆರೆ ಹಿಡಿಯುವುದಾಗಿ ಪೆÇಲೀಸರು ಬಸ್ ಮಾಲಕರಿಗೆ ಭರವಸೆ ನೀಡಿದ್ದಾರೆ.

ಸ ಒಕೆ