ನ 8ರ ಬೆಳಿಗ್ಗೆ 100 ಕೋಟಿ ರೂ ಚಿನ್ನ ಮಾರಾಟ ಮಾಡಿದ ದಿಲ್ಲಿಯ ವ್ಯಾಪಾರಿ

ಸಾಂದರ್ಭಿಕ ಚಿತ್ರ

ನವದೆಹಲಿ : ದಿಲ್ಲಿಯ ಪ್ರಸಿದ್ಧ ಚಿನ್ನದ ವ್ಯಾಪಾರಿಯೊಬ್ಬ ಒಂದೇ ದಿನ ತನ್ನ ಮೂರು ಅಂಗಡಿಗಳಲ್ಲಿ ಸುಮಾರು 100 ಕೋಟಿ ರೂ ಚಿನ್ನ ಮಾರಾಟ ಮಾಡಿದÀ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.

ನವಂಬರ್ 8ರಂದು ಬೆಳಿಗ್ಗೆ 8ರಿಂದ 12 ಗಂಟೆಯ ಮಧ್ಯೆ ಇಷ್ಟೊಂದು ಮೊತ್ತದ ಚಿನ್ನ ನಗದು ಮೂಲಕ ಖರೀದಿಯಾಗಿದೆ. ಅದೇ ದಿನ ರಾತ್ರಿ ದೇಶದಲ್ಲಿ ನೋಟು ನಿಷೇಧ ವಿಷಯ ಪ್ರಕಟಗೊಂಡಿತ್ತು.

“ಆ ದಿನ ರಾತ್ರಿ ಕುಂದನ್ ಕೇರ್ ಪ್ರೊಡಕ್ಟಸ್ ಲಿಮಿಟೆಡ್ಡಿನಲ್ಲಿ ಸುಮಾರು 200-250 ಕಿಲೋ ಚಿನ್ನ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಅಂದರೆ, ಚಾಂದ್ನಿ ಚೌಕಿನ ಕಛ್ ಮಹಾಜನಿ ಪ್ರದೇಶದ ಅಂಗಡಿಯಲ್ಲಿ ಅಂದು ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ 75 ಕೋಟಿ ರೂ ಚಿನ್ನ ಮಾರಾಟವಾಗಿತ್ತು” ಎಂದು ವರದಿ ಹೇಳುತ್ತದೆ.