ತನ್ನ ರೇಪಿಸ್ಟರು 1000 ಹುಡುಗಿಯರನ್ನು ಅತ್ಯಾಚಾರಗೈಯ್ಯುವ ಗುರಿ ಹೊಂದಿದ್ದರು ಎಂದು ಬಹಿರಂಗಪಡಿಸಿದ ದೆಹಲಿ ಸಂತ್ರಸ್ತೆ

ನವದೆಹಲಿ : “ತನ್ನ ಮೇಲೆ ಅತ್ಯಾಚಾರ ನಡೆಸಿದ ಆಟೋ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿ ತಮಗೆ 1000 ಹುಡುಗಿಯರನ್ನು ಅತ್ಯಾಚಾರಗೈಯ್ಯುವ  ಗುರಿಯಿದೆಯೆಂದು ಹೇಳುತ್ತಿದ್ದರು” ಎಂದು ದೆಹಲಿಯ ಸೆಕ್ಟರ್ 29 ಪ್ರದೇಶದಲ್ಲಿ ಇತ್ತೀಚೆಗೆ  ಅತ್ಯಾಚಾರಕ್ಕೊಳಗಾದ 21 ವರ್ಷದ ವಿದ್ಯಾರ್ಥಿನಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಆರೋಪಿಗಳಿಬ್ಬರೂ ತನಗೆ ಮೌನದಿಂದಿರುವಂತೆ ಹೇಳಿದ್ದರಲ್ಲದೆ ಇಲ್ಲದೇ ಹೋದಲ್ಲಿ ನಾಲ್ಕು ವರ್ಷಗಳ ಹಿಂದೆ  ಡಿಸೆಂಬರ್ 16ರಂದು ನಡೆದ ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಗಾದ ಗತಿಯನ್ನೇ ತನಗೂ ಕಾಣಿಸುವುದಾಗಿ ಧಮ್ಕಿ ಹಾಕಿದ್ದರೆಂದೂ ಕಾಲ್ ಸೆಂಟರ್ ಒಂದರಲ್ಲಿ ಪಾರ್ಟ್ ಟೈಮ್ ಉದ್ಯೋಗ ಕೂಡ ಮಾಡುತ್ತಿರುವ ಯುವತಿ ಬಾಯ್ಬಿಟ್ಟಿದ್ದಾಳೆ. “ಅತ್ಯಾಚಾರದ ವೀಡಿಯೊ ತೆಗೆದು ನಾನು ಯಾರ ಮುಂದೆಯಾದರೂ ಬಾಯ್ಬಿಟ್ಟರೆ  ಅದನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ ನನ್ನ ಮಾನ ಹರಾಜು ಹಾಕುವುದಾಗಿಯೂ ಅವರು ಬೆದರಿಸಿದ್ದಾರೆ”ಂದು ಆಕೆ ಹೇಳಿದ್ದಾಳೆ.

ಈ ಪ್ರಕರಣದ ಇಬ್ಬರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.