ಗೌರಿ ಹತ್ಯಾ ಪ್ರಕರಣ

ಸೋನಿಯಾ, ರಾಹುಲ್, ಯೆಚೂರಿ

ವಿರುದ್ಧ ಆರೆಸ್ಸೆಸ್ ಕ್ರಿಮಿನಲ್ ದಾವೆ

ಮುಂಬೈ : ಕನ್ನಡದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ “ಬಿಜೆಪಿ-ಆರೆಸ್ಸೆಸ್ ಸಿದ್ಧಾಂತ” ನಂಟು ಕಲ್ಪಿಸಿ ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋಮಿಯಾ ಗಾಂಧಿ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ವಿರುದ್ಧ ಇಲ್ಲಿನ ಕೋರ್ಟೊಂದರಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಮುಂಬೈ ದಾದರಿನ ಆರೆಸ್ಸೆಸ್ ಕಾರ್ಯಕರ್ತ, ವಕೀಲ ಧೃತಿಮಾನ್ ಜೋಶಿ (27) ಎಂಬವರು ಕೋರ್ಟಿನಲ್ಲಿ ಕ್ರಿಮಿನಲ್ ದಾವೆ ಹೂಡಿದ್ದು, ಆರೋಪಿಗಳಾದ ಗಾಂಧಿಗಳು ಹಾಗೂ ಯೆಚೂರಿ ವಿರುದ್ಧ ಸಮನ್ಸ್ ಜಾರಿಗೊಳಿಸುವಂತೆ ಕೋರಿದ್ದಾರೆ.