ದೀಪಿಕಾಗೆ ವಿನ್ ಡೀಸೆಲ್ ಸೇರಿ ಚೆಂದದ ಮಕ್ಕಳ ಪಡೆಯುವಾಸೆಯಂತೆ !

ದೀಪಿಕಾ ಪಡುಕೋಣೆ ತನಗೆ ವಿನ್ ಡೀಸೆಲ್ ಮೇಲೆ ಕ್ರಶ್ ಇರುವುದಾಗಿಯೂ ಅವರ ಜೊತೆ ಸೇರಿ ಮುದ್ದಾದ ಮಕ್ಕಳನ್ನು ಪಡೆಯುವ ಆಸೆ ತನ್ನ ತಲೆಯಲ್ಲಿ ಬಂದಿರುವುದಾಗಿಯೂ ಸಂದರ್ಶನವೊಂದರಲ್ಲಿ ಹೇಳಿ ಅವಳ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಮಾತ್ರವಲ್ಲ ಅವಳ ಅಭಿಮಾನಿಗಳಿಗೂ ಶಾಕ್ ನೀಡಿದ್ದಾಳೆ. ದೀಪಿಕಾ ನಿಜಕ್ಕೂ ಈ ರೀತಿ ಆಲೋಚಿಸುತ್ತಾಳಾ…ಅಥವಾ ಚೀಪ್ ಪಬ್ಲಿಸಿಟಿಗಾಗಿ ಹೀಗೆಲ್ಲಾ ಮಾತಾಡುತ್ತಾಳೋ ಅರ್ಥವಾಗುತ್ತಿಲ್ಲ. ಬಾಲಿವುಡ್ಡಿನ ನಂಬರ್ ಒನ್ ನಟಿಯಾಗಿರುವ ದೀಪಿಕಾಗೆ ಇಂತಹ ಮಾತಾಡಿಯೇ ಪಬ್ಲಿಸಿಟಿ ಸಿಗಬೇಕಾ…ಅಥವಾ ಸಕ್ಸಸ್ಸಿನ ಅಮಲು ಅವಳ ತಲೆಗೆ ಏರಿದೆಯಾ ಎಂದು ಯಾರಿಗಾದರೂ ಅನಿಸದೇ ಇರದು.

ಕಳೆದ ಬಾರಿ ವಿನ್ ಡೀಸೆಲ್ ಭಾರತಕ್ಕೆ ಬಂದಾಗ “ದೀಪಿಕಾ ಏಂಜೆಲ್ ತರಹ, ಅವಳ ಜೊತೆ ಬಾಲಿವುಡ್ ಚಿತ್ರದಲ್ಲಿ ನಟಿಸಲು ಕಾತರನಾಗಿದ್ದೇನೆ” ಎಂದು ಹೇಳಿದ್ದರು. ಹಾಗಂತ ರಣವೀರ್ ಸಿಂಗ್ ಮತ್ತು ದೀಪಿಕಾ ಡೇಟಿಂಗ್ ಮಾಡುತ್ತಿರುವ ವಿಷಯ ವಿನ್‍ಗೆ ಗೊತ್ತಿಲ್ಲದೇ ಏನಿಲ್ಲ. ಸಂದರ್ಶನವೊಂದರಲ್ಲಿ ರಣವೀರನನ್ನು ದೀಪಿಕಾಳ `ಬಾಯ್ ಫ್ರೆಂಡ್’ ಎಂತಲೇ ಸಂಭೋದಿಸಿದ್ದರು ವಿನ್. ಅದೇನಿದ್ದರೂ ಈಗ ದೀಪಿಕಾಳ ಇಂತಹ ಮಾತನ್ನು ರಣವೀರ್ ಯಾವ ರೀತಿ ಸ್ವೀಕರಿಸುತ್ತಾನೋ ನೋಡಬೇಕಿದೆ.

ಕಳೆದ ವಾರವಷ್ಟೇ ದೀಪಿಕಾ ತನ್ನ ಎದೆಕಾಣುವ ಡ್ರೆಸ್ಸಿನಿಂದಾಗಿ ಸಾಕಷ್ಟು ಟೀಕೆಗೊಳಗಾದ ಬೆನ್ನಲ್ಲೇ ದೀಪಿಕಾಳ ಇಂತಹ ಸ್ಟೇಟ್ಮೆಂಟ್ ಅವಳ ಅಭಿಮಾನಿಗಳಿಗೂ ಇರಿಸುಮುರಿಸು ಉಂಟುಮಾಡಿರುವುದಂತೂ ಸುಳ್ಳಲ್ಲ. ಅಂದ ಹಾಗೆ ಆಕೆಯ ವಿನ್ ಡೀಸೆಲ್ ಜೊತೆಗಿನ ಮೊದಲ ಹಾಲಿವುಡ್ ಚಿತ್ರ `ತ್ರಿಬಲ್ ಎಕ್ಸ್’ ಕಳೆದ ವಾರ ರಿಲೀಸ್ ಆಗಿದ್ದು ಬಾಕ್ಸಾಫೀಸಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.