ರಣವೀರ್ `ಲೈಕ್’ ಹಾಕಿದ ಈ ಬಾಲೆಯರು ಯಾರು…

ರಣವೀರ್ ಸಿಂಗ್ ಈ ಬಾಲೆಯರ ಫೊಟೋಗೆ ಲೈಕ್ ಹಾಕಿದ್ದಾನೆ. ಹಾಗಾದರೆ ಈ ಬಾಲೆಯರು ಯಾರು … ಗುರುತು ಸಿಕ್ಕಿತಾ…ದೊಡ್ಡ ಹುಡುಗಿ ಗುಳಿಕೆನ್ನೆ ನೋಡಿ ಗೆಸ್ ಮಾಡಿರಬಹುದಲ್ವಾ? ಯೆಸ್, ದೀಪಿಕಾ ಪಡುಕೋಣೆ ಅವಳ ತಂಗಿ ಅನಿಶಾ ಜೊತೆ ಪಾರ್ಕಿನಲ್ಲಿ ತೆಗೆಸಿಕೊಂಡ ಸುಂದರ ಫೋಟೋ ಇದು.

ಈ ಅಪರೂಪದ ಸ್ವೀಟ್ ಫೊಟೋವನ್ನು ಇನ್ಸ್ಟಾಗ್ರಾಮಿನಲ್ಲಿ ಅಪ್ಲೋಡ್ ಮಾಡಿದ್ದು ಸ್ವತಃ ದೀಪಿಕಾಳೇ. ಅವಳ ಆ ತುಂಟ ನಗು ಈಗಲೂ ಹಾಗೇ ಇದೆ. ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಇರದ ದೀಪಿಕಾ ಈಗ ತನ್ನ ಪರ್ಸನಲ್ ಫೊಟೋ ಹಾಕಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾಳೆ. ವಿಶೇಷ ಅಂದರೆ ದೀಪಿಕಾ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಈ ಫೊಟೋಗೆ ಲೈಕ್ ಹಾಕಿದ್ದು.

ದೀಪಿಕಾ-ರಣವೀರ್ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ರೂಮರ್ ಕೆಲವು ದಿನಗಳ ಹಿಂದೆ ಹಬ್ಬಿತ್ತು. ಆದರೆ ಅವರಿನ್ನೂ ಜೊತೆಯಾಗಿಯೇ ಇದ್ದಾರೆ. ಕಳೆದ ತಿಂಗಳು ಜೊತೆಯಾಗಿ ರಜೆಯ ಮಜಾ ಅನುಭವಿಸಿ ಬಂದಿದ್ದ ಈ ಜೋಡಿ ಮೊನ್ನೆ ಕರಣ್ ಜೋಹರ್ ಪಾರ್ಟಿಗೂ ರಣವೀರನೇ ದೀಪಿಕಾ ಜೊತೆ ಸ್ವತಃ ತಾನೇ ಕಾರು ಡ್ರೈವ್ ಮಾಡಿಕೊಂಡು ಹೋಗಿದ್ದ.