“ದೀಪಿಕಾ, ಪ್ರಿಯಾಂಕಾಗಿಂತ ಕತ್ರೀನಾ ಒಳ್ಳೆಯ ಡ್ಯಾನ್ಸರ್”!

ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾರಿಗಿಂತ ಕತ್ರೀನಾ ಕೈಫ್ ಉತ್ತಮ ಡ್ಯಾನ್ಸರ್ ಎನ್ನುತ್ತಾನೆ ಸಲ್ಮಾನ್ ಖಾನ್. “ಕತ್ರೀನಾ ಸಿನಿ ಇಂಡಸ್ಟ್ರಿಗೆ ಬರುವಾಗ ಆಕೆಗೆ ಡ್ಯಾನ್ಸ್ ಮಾಡುವುದು ಗೊತ್ತಿರಲಿಲ್ಲ. ಈಗ ಇಂಡಸ್ಟ್ರಿಯ ಉತ್ತಮ ಡ್ಯಾನ್ಸರುಗಳಲ್ಲಿ ಕತ್ರೀನಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾಳೆ. ದೀಪಿಕಾ, ಪ್ರಿಯಾಂಕಾರಿಗಿಂತ ಕತ್ರೀನಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ” ಎನ್ನುವ ಸರ್ಟಿಫಿಕೇಟ್ ನೀಡಿದ್ದಾನೆ ಸಲ್ಲುಮಿಯಾ.

ಕತ್ರೀನಾ ಈಗ ಸಲ್ಮಾನ್ ಜೊತೆ `ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ನಟಿಸುತ್ತಿದ್ದು ಅವರ ಕೆಲವು ಹಾಡಿನ ವೀಡಿಯೋಗಳು ಈಗಾಗಲೇ ಬಿಡುಗಡೆಯಾಗಿವೆ. ಸಲ್ಮಾನ್-ಕತ್ರೀನಾರ `ಸ್ವ್ಯಾಗ್ ಸೆ ಕರೇಂಗೆ ಸಬ್ಕಾ ಸ್ವಾಗತ್’ ಡ್ಯಾನ್ಸ್ ಅಂತೂ ಸಿನಿ ಹಾಗೂ ಡ್ಯಾನ್ಸ್ ಪ್ರಿಯರಿಗೆ ಭಾರೀ ಇಷ್ಟವಾಗಿದೆ. ಕತ್ರೀನಾಳ ಬೆಲ್ಲಿ ಹಾಗೂ ಹಿಪ್ ಮೂವ್ಮೆಂಟ್ಸ್ ಅಂತೂ ಬಹಳ ಸೆಕ್ಸೀಯಾಗಿ ಮೂಡಿಬಂದಿದೆ.

ಒಂದು ಕಾಲದಲ್ಲಿ ಪ್ರೇಮಿಗಳಾಗಿ ಮತ್ತೆ ಬ್ರೇಕಪ್ ಮಾಡಿಕೊಂಡಿದ್ದ ಸಲ್ಲು-ಕ್ಯಾಟ್ ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಮತ್ತಿಷ್ಟು ಹತ್ತಿರವಾಗಿದ್ದಾರೆ. ಅವರಿಬ್ಬರ ನಡುವೆ ಮತ್ತೆ ಪ್ರೀತಿ ಚಿಗುರಿದೆ ಎನ್ನುವ ರೂಮರ್ ಕೂಡಾ ಇದೆ. ಅದಲ್ಲದೇ ಸಲ್ಮಾನನ `ದಬಾಂಗ್’ ಟೂರಿನಲ್ಲಿ ಕೂಡಾ ಕತ್ರೀನಾ ಭಾಗವಹಿಸುತ್ತಿದ್ದು ಅವರ ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ಕೆಮೆಸ್ಟ್ರಿ ಮತ್ತಿಷ್ಟು ಗಾಸಿಪ್ ಕಾಲಮ್ಮಿಗೆ ಆಹಾರವಾಗಿದೆ.

ಅದೇನೇ ಇದ್ದರೂ ಕತ್ರೀನಾಳನ್ನು ಹೊಗಳುವ ಭರದಲ್ಲಿ ಸಲ್ಮಾನ್ ದೀಪಿಕಾ-ಪ್ರಿಯಾಂಕಾರಿಗೆ ಟಾಂಗ್ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ತುಸು ಬೇಸರವಾಗಿದೆ. ಪ್ರಿಯಾಂಕಾ-ದೀಪಿಕಾರ `ಪಿಂಗಾ’ ಡ್ಯಾನ್ಸ್, ಪಿಗ್ಗಿಯ `ರಾಮ್ ಚಾಹೆ’ ಡ್ಯಾನ್ಸ್, ಡಿಪ್ಪಿಯ `ಗೂಮರ್’ ಡ್ಯಾನ್ಸ್ ಇದೆಲ್ಲವನ್ನೂ ಸಲ್ಮಾನ್ ನೋಡಿಯೇ ಇಲ್ವಾ ಎಂದು ಕೇಳುತ್ತಿದ್ದಾರೆ ಅವರ ಅಭಿಮಾನಿಗಳು. ಸಲ್ಲುವಿನ ಈ ಹೇಳಿಕೆಗೆ ಪಿಗ್ಗಿ-ಡಿಪ್ಪಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎನ್ನುವ ಕುತೂಹಲವಂತೂ ಇದೆ.