ಶ್ರದ್ಧೆಯಿಂದ ಕೃಷಿ ಕೈಗೊಳ್ಳುವ ಕೃಷಿಕರಿಗೆ ದುರ್ಭಿಕ್ಷ ಬರುವುದಿಲ್ಲ : ಸ್ವರ್ಣವಲ್ಲೀ ಶ್ರೀ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : “ಶ್ರದ್ಧೆಯಿಂದ ಕೃಷಿ ಕಾರ್ಯ ಕೈಗೊಳ್ಳುವ ಕೃಷಿಕರಿಗೆ ಎಂದೂ ದುರ್ಭಿಕ್ಷ ಬರುವುದಿಲ್ಲ. ಪ್ರತಿ ನಿತ್ಯ ಜಪಾನುಷ್ಠಾನ, ದೇವರ ಪೂಜೆ, ಮಾಡುವ ಯಾರಿಗೂ ಪಾಪದ ಲೇಪ ತಟ್ಟುವದಿಲ್ಲ” ಎಂದು ಸ್ವರ್ಣವಲ್ಲೀ ಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಬುಧವಾರ ಪಟ್ಟಣದ ನಾಯಕನಕೆರೆ ಶಾರದಾಂಬಾ ಮತ್ತು ಹನುಮಂತ ದೇವರ ವಾರ್ಷಿಕ ವರ್ಧಂತಿ ಉತ್ಸವದ ಸಂದರ್ಭದಲ್ಲಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

“ಕೃಷಿಕರು ಕೃಷಿ ಕಾರ್ಯದ ಜೊತೆಯಲ್ಲಿಯೇ ಬೇರೆ, ಬೇರೆ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಲು ಅಗಾಧ ಅವಕಾಶಗಳು ಇವೆ. ಪ್ರಾಮಾಣಿಕ ಪರಿಶ್ರಮದಿಂದ ಕೃಷಿಯಲ್ಲಿಯೂ ಸಂಪತ್ತು ಗಳಿಸಲು ಸಾಧ್ಯವಿದೆ. ಪುರೋಹಿತರು ಅನುಷ್ಠಾನದ ಮೂಲಕ ಅಂತಃಸತ್ವ ವೃದ್ಧಿಸಿಕೊಳ್ಳಬೇಕು. ಕೇವಲ ಬಾಹ್ಯ ಆಡಂಬರಕ್ಕೆ ಪ್ರಾಧಾನ್ಯತೆ ಕೊಡದೇ ಅಂತಃಸತ್ವ ಬೆಳೆಸಿಕೊಳ್ಳುವತ್ತ ಲಕ್ಷ್ಯ ವಹಿಸಬೇಕು. ಶ್ರಮ ವಹಿಸಿ ಗಳಿಸಿದ ಸಂಪತ್ತು ಶಾಶ್ವತವಾಗಿದ್ದು ಶ್ರಮವಿಲ್ಲದೇ ಗಳಿಸಿದ ಸಂಪತ್ತು ಕ್ಷಣಿಕವಾಗಿರುತ್ತದೆ. ಜಗತ್ತಿನ ಏಳ್ಗೆಗೆ ಪೃಕೃತಿ ಮಾತೆಯೇ ಕಾರಣ. ಪೃಕೃತಿಯ ಉಳಿವಿಗೆ ಎಲ್ಲರೂ ಶ್ರಮಿಸುವ ಜೊತೆಯಲ್ಲಿ ನೀರಿನ ಪ್ರಾಮುಖ್ಯತೆ ಅರಿತು ಜಲ ಸಂರಕ್ಷಣೆ ಮಾಡುವತ್ತ ಗಮನ ನೀಡಬೇಕು” ಎಂದರು.

LEAVE A REPLY